ಚಾಣಕ್ಯ ನೀತಿಯಲ್ಲಿ ಸುಖ ಸಂಸಾರದ ಹಲವು ಗುಟ್ಟುಗಳನ್ನು ಆಚಾರ್ಯ ಚಾಣಕ್ಯರು ತಿಳಿಸಿದ್ದಾರೆ. ಇವರ ಪ್ರಕಾರ, ಹೆಂಡತಿಯಲ್ಲಿರುವ ಕೆಲವು ಕೆಟ್ಟ ಗುಣಗಳು ಗಂಡನ ಅವನತಿಗೆ ಕಾರಣ ಎನ್ನಲಾಗಿದೆ.
ಆಚಾರ್ಯ ಚಾಣಕ್ಯರ ಪ್ರಕಾರ, ಹೆಂಡತಿಯ ಅವಗುಣಗಳು ಗಂಡನನ್ನು ಅವನತಿಯತ್ತ ಧೂಕುವುದರಿಂದ ಇಂತಹ ಗುಣವುಳ್ಳ ಮಹಿಳೆಯನ್ನು ಗಂಡನ ಶತ್ರುಗಳಿಗಿಂತ ಕಡಿಮೆಯಿಲ್ಲ ಎಂದು ಬಣ್ಣಿಸಲಾಗಿದೆ.
ಕುಟುಂಬಕ್ಕೆ ಮಾರಕವಾಗುವಂತಹ ಕೆಟ್ಟ ಕೆಲಸ ಮಾಡುವ ಕೆಟ್ಟ ಸಹವಾಸವುಳ್ಳ ಮಹಿಳೆಯಿಂದ ಜೀವನವೇ ಸರ್ವನಾಶವಾಗುತ್ತದೆ.
ಆಸೆ ಮನುಷ್ಯನ ಸಹಜ ಗುಣ. ಆದರೆ ದುರಾಸೆ ಜೀವನವನ್ನೇ ನರಕವಾಗಿಸುತ್ತದೆ. ಇಂತಹ ಮಹಿಳೆಯರಿಂದ ಗಂಡ ಅವನತಿ ಹೊಂಡುತ್ತಾನೆ.
ಮನೆಯವರ ಬೇಕು-ಬೇಡಗಳನ್ನು ಗಮನಿಸದೆ ಮನಬಂದಂತೆ ನಡೆದುಕೊಳ್ಳುವ ಮಹಿಳೆಯರು ಗಂಡಿನ ಜೀವನವನ್ನು ಹಾಳು ಮಾಡುತ್ತಾರೆ.
ದುಡ್ಡನ್ನು ನೀರಿನಂತೆ ಖರ್ಚು ಮಾಡುವ ಹೆಣ್ಣಿಗೆ ಗಂಡ ಎಷ್ಟು ಸಂಪಾದಿಸಿ ಕೊಟ್ಟರೂ ಸಾಕಾಗುವುದಿಲ್ಲ. ಇಂತಹ ಹೆಣ್ಣು ಸುಖ ಸಂಸಾರಕ್ಕೆ ಮಾರಕ ಎನ್ನಬಹುದು.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.