ತೂಕ ಇಳಿಕೆ ಹಾಗೂ ಹೊಟ್ಟೆಯ ಕಠಿಣ ಕೊಬ್ಬನ್ನು ಕರಗಿಸಲು ಚಿಯಾ ಸೀಡ್ಸ್ ವರದಾನಕ್ಕಿಂತ ಕಡಿಮೆ ಇಲ್ಲ.
ನಿತ್ಯ ಕೇವಲ 1 ಸ್ಪೂನ್ ಚಿಯಾ ಸೀಡ್ಸ್ ಬಳಸುವುದರಿಂದ ಕೇವಲ ತೂಕ ಇಳಿಕೆಯಷ್ಟೇ ಅಲ್ಲ ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ.
ಚಿಯಾ ಸೀಡ್ಸ್ ಸಾಕಷ್ಟು ಪೌಷ್ಟಿಕಾಂಶಗಳಿಂದ ತುಂಬಿದ್ದು ಇದನ್ನು ಸೂಪರ್ ಫುಡ್ ಎಂದು ಕರೆಯಲಾಗುತ್ತದೆ.
ಚಿಯಾ ಬೀಜಗಳಲ್ಲಿ ಫೈಬರ್, ಪ್ರೊಟೀನ್, ಆರೋಗ್ಯಕರು ಕೊಬ್ಬುಗಳು ಸಮೃದ್ಧವಾಗಿದ್ದು ಇದು ತೂಕ ನಷ್ಟಕ್ಕೆ ಪೂರಕವಾಗಿದೆ.
ಚಿಯಾ ಸೀಡ್ಸ್ ನಲ್ಲಿ ಕರಗುವ ಮತ್ತು ಕರಗದ ಫೈಬರ್ ಸಮೃದ್ಧವಾಗಿದೆ. ಹಾಗಾಗಿ, ಇದು ಅತಿಯಾಗಿ ತಿನ್ನುವುದನ್ನು ಕಡಿಮೆ ಮಾಡುತ್ತದೆ.
ಚಿಯಾ ಸೀಡ್ಸ್ ಪ್ರೊಟೀನ್ ನಲ್ಲಿಯೂ ಸಮೃದ್ಧವಾಗಿದ್ದು ಇದು ಚಯಾಪಚಯವನ್ನು ಹೆಚ್ಚಿಸುವುದರ ಜೊತೆಗೆ ಸ್ನಾಯುವಿನ ದ್ರವ್ಯರಾಶಿಯನ್ನು ಉತ್ತೇಜಿಸುತ್ತದೆ.
ಚಿಯಾ ಸೀಡ್ಸ್ ನಲ್ಲಿ ಒಮೆಗಾ 3 ಕೊಬ್ಬಿನಾಮ್ಲಗಳಿದ್ದು ಇದು ತೂಕ ನಷ್ಟವನ್ನು ಪ್ರಚೋದಿಸುತ್ತದೆ. ಜೊತೆಗೆ ಹೃದಯದ ಆರೋಗ್ಯವೂ ಉತ್ತಮವಾಗಿರುತ್ತದೆ.
ಚಿಯಾ ಸೀಡ್ಸ್ ಸಮತೋಲಿತ ಆಹಾರವಾಗಿದ್ದು ಇದು ಅತಿಯಾಗಿ ತಿನ್ನುವುದನ್ನು ಕಡಿಮೆ ಮಾಡುವುದರ ಜೊತೆಗೆ ದೇಹವನ್ನು ಹೈಡ್ರೀಕರಿಸುತ್ತದೆ.
ರಾತ್ರಿ ಒಂದು ಲೋಟ ನೀರಿನಲ್ಲಿ 1 ಸ್ಪೂನ್ ಚಿಯಾ ಸೀಡ್ಸ್ ನೆನೆಹಾಕಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಇದನ್ನು ಕುಡಿಯುತ್ತಾ ಬಂದರೆ ಸುಲಭವಾಗಿ ತೂಕ ಇಳಿಕೆಯಾಗಿ, ಸ್ಲಿಮ್ ಬೆಲ್ಲಿ ನಿಮ್ಮದಾಗುತ್ತದೆ. ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.