ಜಿರಳೆಗಳ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ಅವುಗಳನ್ನು ಸಮಯಕ್ಕೆ ಸರಿಯಾಗಿ ನಿಯಂತ್ರಿಸುವುದು ಅವಶ್ಯಕ.
ಇಲ್ಲದಿದ್ದರೆ ಫುಡ್ ಪಾಯಿಸನ್ ಸಮಸ್ಯೆಗೆ ಕಾರಣವಾಗಬಹುದು. ಅಡುಗೆಗೆ ಬಳಸುವ ಈ ವಸ್ತುಗಳಿಂದ ಜಿರಳೆಗಳನ್ನು ಹೊಡೆದೋಡಿಸಬಹುದು.
ಲವಂಗದ ಕೆಲವು ತುಂಡುಗಳನ್ನು ಮನೆಯ ಮೂಲೆಗಳಲ್ಲಿ ಇರಿಸಿದರೆ ಜಿರಳೆಗಳು ಓಡಿಹೋಗುತ್ತವೆ.
ಜಿರಳೆಗಳೂ ಸೀಮೆ ಎಣ್ಣೆಯ ವಾಸನೆಯನ್ನು ಇಷ್ಟಪಡುವುದಿಲ್ಲ ಮತ್ತು ಅವು ಅದರಿಂದ ಓಡಿಹೋಗುತ್ತವೆ.
ಮನೆಯ ಮೂಲೆ ಮೂಲೆಗೂ ಸೀಮೆ ಎಣ್ಣೆ ಸಿಂಪಡಿಸಿ. ಇಲ್ಲಿ ಜಿರಳೆಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುತ್ತವೆ.
ಪಲಾವ್ ಎಲೆಯ ವಾಸನೆಯನ್ನು ಜಿರಳೆಗಳು ಸಹಿಸುವುದಿಲ್ಲ. ಈ ಎಲೆಗಳನ್ನು ಪುಡಿಮಾಡಿ, ಮನೆಯಲ್ಲಿ ಅಲ್ಲಲ್ಲಿ ಇರಿಸಿದರೆ ಜಿರಳೆಗಳು ಬರುವುದಿಲ್ಲ.
ಜಿರಳೆಗಳು ಕೊಳಕು ಸ್ಥಳಗಳಲ್ಲಿ ವಾಸಿಸುತ್ತವೆ ಮತ್ತು ಅವುಗಳು ತಮ್ಮ ಮೊಟ್ಟೆಗಳನ್ನು ಇಡುತ್ತವೆ.
ಅಡುಗೆ ಮನೆಯ ಸಿಂಕ್, ಬಾತ್ ರೂಂ, ಮನೆಯ ಮೂಲೆಗಳನ್ನು ಸ್ವಚ್ಛಗೊಳಿಸಿದರೆ ಅಲ್ಲಿ ಜಿರಳೆ ಕಾಣಿಸುವುದಿಲ್ಲ.