ಬೇರು ಸಮೇತ ಕೂದಲನ್ನು ಕಡುಕಪ್ಪಾಗಿಸಿ, ದಷ್ಟಪುಷ್ಟವಾಗಿ ಬೆಳೆಯುವಂತೆ ಮಾಡುತ್ತೆ ತೆಂಗಿನಸಿಪ್ಪೆ

ಕೂದಲಿನ ಆರೋಗ್ಯ

ತೆಂಗಿನಕಾಯಿ ರುಚಿ ಮತ್ತು ಆರೋಗ್ಯದ ದೃಷ್ಟಿಯಿಂದ ತುಂಬಾ ಉಪಯುಕ್ತ. ಇನ್ನು ತೆಂಗಿನಕಾಯಿಯ ತಿರುಳನ್ನು ಅನೇಕ ಖಾದ್ಯಗಳನ್ನು ತಯಾರಿಸಲು ಬಳಸುತ್ತೇವೆ. ಆದರೆ ಅದರ ಸಿಪ್ಪೆಯನ್ನು ಎಂದಾದರೂ ಬಳಸಿದ್ದೀರಾ? ಇದು ಕೂದಲಿನ ಆರೋಗ್ಯಕ್ಕೆ ಬಹಳಷ್ಟು ಪ್ರಯೋಜನ ನೀಡುತ್ತದೆ.

ತೆಂಗಿನ ಸಿಪ್ಪೆ ಬಳಕೆ

ಗ್ರಾಮೀಣ ಪ್ರದೇಶದಲ್ಲಿ ತೆಂಗಿನ ಸಿಪ್ಪೆಯಿಂದ ಹಗ್ಗವನ್ನು ತಯಾರಿಸುತ್ತಾರೆ. ಆದರೆ ಹೇರ್ ಡೈ ಆಗಿ ಬಳಸಬಹುದು ಎಂದು ನಿಮಗೆ ತಿಳಿದಿದೆಯೇ? ಹೌದು, ಬಿಳಿ ಕೂದಲನ್ನು ಕಪ್ಪಾಗಿಸಲು ತೆಂಗಿನ ಸಿಪ್ಪೆಯನ್ನು ಬಳಸಬಹುದು.

ಹೇರ್‌ ಡೈ

ಈ ಹೇರ್‌ ಡೈ ಮೂಲಕ ತಕ್ಷಣವೇ ಬಿಳಿಕೂದಲನ್ನು ಕಪ್ಪಾಗಿ ಕಾಣುವಂತೆ ಮಾಡಬಹುದು. ಇದಕ್ಕೆ ನಿಮಗೆ ಯಾವುದೇ ರೀತಿಯ ಬಣ್ಣ ಅಗತ್ಯವಿಲ್ಲ. ತೆಂಗಿನ ಸಿಪ್ಪೆಯಿಂದ ಕೂದಲನ್ನು ಕಪ್ಪಾಗಿಸುವುದು ಹೇಗೆ ಎಂದು ತಿಳಿದುಕೊಳ್ಳೋಣ

ಮಾಡುವ ವಿಧಾನ

ಮೊದಲು ತೆಂಗಿನ ಸಿಪ್ಪೆ, 4 ರಿಂದ 5 ಬಾದಾಮಿ ಮತ್ತು ಸ್ವಲ್ಪ ಕರ್ಪೂರದ ಪುಡಿಯನ್ನು ತೆಗೆದುಕೊಂಡು ಅದನ್ನು ಸುಡಿ. ಇದಾದ ನಂತರ ತಣ್ಣಗಾಗಲು ಬಿಡಿ, ಈ ಮಿಶ್ರಣ ತಣ್ಣಗಾದಾಗ ಬಳಿಕ ಕೈಗಳ ಸಹಾಯದಿಂದ ಪುಡಿ ಮಾಡಿ.

ಮಿಶ್ರಣ

ಈಗ ಈ ಪುಡಿಗೆ ಸ್ವಲ್ಪ ತೆಂಗಿನ ಎಣ್ಣೆ ಅಥವಾ ಬಾದಾಮಿ ಎಣ್ಣೆಯನ್ನು ಹಾಕಿ. ಸಿದ್ಧಪಡಿಸಿದ ಮಿಶ್ರಣವನ್ನು ನಿಮ್ಮ ಬಿಳಿಕೂದಲಿನ ಮೇಲೆ ಹಚ್ಚಿ ಸುಮಾರು 30 ರಿಂದ 40 ನಿಮಿಷಗಳ ನಂತರ ಶಾಂಪೂ ಸಹಾಯದಿಂದ ತೊಳೆಯಿರಿ. ಹೀಗೆ ಮಾಡಿದರೆ ನಿಮ್ಮ ಕೂದಲು ಲುತಕ್ಷಣವೇ ಕಪ್ಪಾಗ ಪ್ರಾರಂಭಿಸುತ್ತದೆ.

ಆರೋಗ್ಯ ಪ್ರಯೋಜನ

ಇದಷ್ಟೇ ಅಲ್ಲದೆ, ತೆಂಗಿನ ಸಿಪ್ಪೆಯು ಅನೇಕ ಆರೋಗ್ಯ ಪ್ರಯೋಜನಗಳನ್ನು ಸಹ ಹೊಂದಿದೆ. ಇದು ಪೈಲ್ಸ್ ಸಮಸ್ಯೆಗಳನ್ನು ನಿವಾರಿಸಲು, ಹಲ್ಲುಗಳ ಹೊಳಪನ್ನು ಹೆಚ್ಚಿಸುವಲ್ಲಿ ಮತ್ತು ಋತುಚಕ್ರದ ಸಮಸ್ಯೆಗಳಿಂದ ಪರಿಹಾರ ನೀಡಲು ಬಳಸಬಹುದು.

ಸೂಚನೆ

ಪ್ರಿಯ ಓದುಗರೇ, ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.

VIEW ALL

Read Next Story