ಉದ್ದ ಕೂದಲು ಯಾವಾಗಲೂ ಸೌಂದರ್ಯವನ್ನು ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ. ಆದರೆ, ಉದ್ದನೆಯ ಕೂದಲು ಬೆಳೆಸುವುದರಿಂದ ಕೂದಲಿನ ತುದಿ ಒಡೆಯಲು ಆರಂಭಿಸುತ್ತದೆ. ಇದರ ಕಾರಣ ನೀವು ಪದೇ ಪದೇ ಪಾರ್ಲರ್‌ಗೆ ಭೇಟಿ ನೀಡಿ ಕೂದಲನ್ನು ಕತ್ತರಿಸಬೇಕಾಗಿ ಬರುತ್ತದೆ. ಆದರೆ ಇನ್ನು ಮುಂದೆ ಆ ತಲೆ ನೋವು ಬೇಡ. ಉದ್ದನೆಯ ಕೂದಲಿನೊಂದಿಗೆ ಸ್ಪ್ಲಿಟ್ ಎಂಡ್ಸ್ ರಹಿತ ಕೂದಲು ನಿಮ್ಮದಾಗಬೇಕಾದರೆ ಈ ಸಲಹೆಗಳನ್ನು ಪಾಲಿಸಿ...
ಒಂದು ಮೊಟ್ಟೆಗೆ 1 ಚಮಚ ಬಾದಾಮಿ ಎಣ್ಣೆ ಅಥವಾ ಆಲಿವ್ ಎಣ್ಣೆಯಲ್ಲಿ 1 ಚಮಚ ಜೇನುತುಪ್ಪವನ್ನು ಬೆರೆಸಿ ಹೇರ್‌ಪ್ಯಾಕ್ ಮಾಡಿ, ಈ ಮಿಶ್ರಣವನ್ನು ಕೂದಲಿಗೆ ಹಚ್ಚಿ ಅರ್ಧ ಗಂಟೆಯ ಕಾಲ ಹಾಗೆಯೇ ಇರಿಸಿ ನಂತರ ಶಾಂಪುವಿನಿಂದ ನಿಮ್ಮ ಕೂದನ್ನು ತೊಳೆಯಿರಿ.
ಬೆಚ್ಚಗಿನ ತೆಂಗಿನ ಎಣ್ಣೆಯನ್ನು ಬೇರುಗಳಿಂದ ಕೂದಲಿನ ತುದಿಯವರೆಗೆ ಮಸಾಜ್ ಮಾಡಿ, ಕನಿಷ್ಠ ಒಂದು ಗಂಟೆಯ ಕಾಲ ಕೂದಲಲ್ಲಿ ಎಣ್ಣೆಯನ್ನು ಬಿಡಿ, ನಂತರ ಶಾಂಪೂ ಬಳಸಿ ನೀರಿನಿಂದ ಕೂದಲನ್ನು ಚೆನ್ನಾಗಿ ತೊಳೆಯಿರಿ.
ಕೂದಲಿನ ಒರಟುತನವನ್ನು ಕಡಿಮೆ ಮಾಡಲು ಮತ್ತು ಒಡೆದ ತುದಿಗಳನ್ನು ತಡೆಯಲು ಪ್ರತಿದಿನ ಶಾಂಪೂ ಮಾಡುವುದನ್ನು ತಪ್ಪಿಸಿ. ಏಕೆಂದರೆ ಪ್ರತಿನಿತ್ಯ ಕೂದಲು ತೊಳೆಯುವುದರಿಂದ ತಲೆಯಲ್ಲಿನ ನೈಸರ್ಗಿಕ ಎಣ್ಣೆ ಕಡಿಮೆಯಾಗುತ್ತದೆ, ಇದರಿಂದ ಕೂದಲಿಗೆ ಬೇಕಾದ ಪೋಷಣೆಯನ್ನು ಸಿಗದಂತೆ ತಪ್ಪಿಸುದುತ್ತದೆ.
ನೈಸರ್ಗಿಕ ಗುಣಗಳಿಂದ ಸಮೃದ್ಧವಾಗಿರುವ ಜೇನು ಕೂದಲು ಉದುರುವುದನ್ನು ತಡೆಯುತ್ತದೆ. ಹುಳಿ ಮೊಸರು ಮತ್ತು ಜೇನುತುಪ್ಪವನ್ನು ಬೆರೆಸಿ ಮಿಶ್ರಣವನ್ನು ಮಾಡಿ ಮತ್ತು ಮಿಶ್ರಣವನ್ನು ಕೂದಲಿನ ತುದಿಗೆ ಹಚ್ಚಿ ಅರ್ಧ ಘಂಟೆಯವರೆಗೆ ಇರಿಸಿ ನಂತರ ನಿಮ್ಮ ಕೂದಲನ್ನು ಶಾಂಪೂ ಬಳಸಿ ತೊಳೆಯಿರಿ. ಇದರಿಂದ ಒಡೆದ ತುದಿಗಳು ಮಾಯವಾಗುತ್ತದೆ.
ತೆಂಗಿನ ಎಣ್ಣೆ, ಆಲಿವ್ ಎಣ್ಣೆ ಮತ್ತು ಕ್ಯಾಸ್ಟರ್ ಆಯಿಲ್ ಅನ್ನು ಬೆರೆಸಿ ತೆಲೆಗೆ ಹಚ್ಚಿ ಸುಮಾರು 4 ಗಂಟೆಗಳ ಕಾಲ ಹಾಗೆಯೇ ಬಿಟ್ಟು ನಂತರ ಸ್ನಾನ ಮಾಡಿ ಇದರಿಂದ ನಿಮ್ಮ ಕೂದಲು ಗಟ್ಟಿ ಮುಟ್ಟಾಗುತ್ತದೆ.
ನಿಮಗೆ ಈಗಾಗಲೆ ಒಡೆದ ಕೂದಲು ಇದ್ದರೆ, ಒಡೆದ ತುದಿಗಳನ್ನಷ್ಟೆ ಕತ್ತರಿಸಿ, ನಂತರ ಈ ಸಲಹೆಗಳನ್ನು ಪಾಲಿಸಿ ಇದರಿಂದ ಬಲಿಷ್ಠ ಕೂದಲು ನಿಮ್ಮದಾಗುತ್ತದೆ.
ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಿ. zee kannada news ಇದನ್ನು ಖಚಿತಪಡಿಸುವುದಿಲ್ಲ.