ಪಿರಿಯಡ್ಸ್ ಸಮಯದಲ್ಲಿ, ಅವಳು ಹೊಟ್ಟೆ ನೋವು, ಬೆನ್ನು ನೋವು ಮತ್ತು ದೈಹಿಕ ಆಯಾಸದಿಂದ ಮಹಿಳೆಯರು ತುಂಬಾ ತೊಂದರೆಗೊಳಗಾಗುತ್ತಾಳೆ. ಮುಟ್ಟಿನ ಸಮಯದಲ್ಲಿ ನೋವನ್ನು ಕಡಿಮೆ ಮಾಡಲು, ಈ ಪಾನೀಯವನ್ನು ಸೇವಿಸಬೇಕು.
ಶುಂಠಿ ಮತ್ತು ನಿಂಬೆ ಬೆರೆಸಿದ ಚಹಾ ಸೇವಿಸಿದರೆ ಮುಟ್ಟಿನ ಸಮಯದಲ್ಲಿ ಕಾಣಿಸಿಕೊಳ್ಳುವ ಹೊಟ್ಟೆ ನೋವು ಕಡಿಮೆಯಾಗುತ್ತದೆ.
ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ಅಧ್ಯಯನ ಪ್ರಕಾರ ಚಕ್ಕೆಯ ಚಹಾ ಪೀರಿಯೇಡ್ಸ್ ಸಮಯದಲ್ಲಿ ಕಾಣಿಸುವ ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಕ್ಯಾಮೊಮೈಲ್ ಚಹಾ ಋತು ಚಕ್ರದ ಸಮಯದಲ್ಲಿ ಉತ್ತಮ ನಿದ್ದೆ ತರಿಸುತ್ತದೆ. ಅಲ್ಲದೆ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಉರಿಯೂತ ನಿವಾರಕ ಮತ್ತು ಉತ್ಕರ್ಷ ನಿರೋದಕ ಗುಣಲಕ್ಷಣಗಳು ಅರಿಶಿನದಲ್ಲಿ ಕಂಡು ಬರುತ್ತವೆ. ಇವು ಮುಟ್ಟಿನ ನೋವನ್ನು ನಿವಾರಿಸಲು ಸಹಾಯ ಮಾಡುತ್ತವೆ.
ಇನ್ನು ಕೆಂಪು ರಸಬೇರಿ ಚಹಾವನ್ನು ಕೂಡಾ ಕುಡಿಯಬಹುದು. ಇದರ ಬಳಕೆಯಿಂದ ನೋವು ಮತ್ತು ಸೆಳೆತ ಕಡಿಮೆಯಾಗುತ್ತದೆ.
ಥೈಮ್ ಟೀ ಅಂದರೆ ಸೆಲರಿ ಎಲೆಗಳಿಂದ ತಯಾರಿಸಿದ ಚಹಾ. ಇದು ನೀವು ನಿವಾರಿಸಲು ಸಹಾಯ ಮಾಡುತ್ತದೆ.
ಋತು ಚಕ್ರದ ನೋವನ್ನು ನಿವಾರಿಸಲು ಸೊಂಪಿನ ಚಹಾವನ್ನು ಸೇವಿಸಬಹುದು.
ಈ ಚಹಾವನ್ನು ಸೇವಿಸುವ ಮೂಲಕ ಮುಟ್ಟಿನ ಸಂದರ್ಭ ಕಾಣಿಸಿಕೊಳ್ಳುವ ನೋವಿನಿಂದ ಪರಿಹಾರ ಪಡೆಯಬಹುದು.