ಸೌತೆಕಾಯಿ ಸುಟ್ಟ ಚರ್ಮಕ್ಕೆ ತ್ವರಿತ ಪರಿಹಾರ ನೀಡುತ್ತದೆ. ಇದು ಮೊಡವೆಗಳನ್ನು ನಿವಾರಿಸಿ, ರಂಧ್ರಗಳನ್ನು ಬಿಗಿಗೊಳಿಸುವಲ್ಲಿಯೂ ಪರಿಣಾಮಕಾರಿ ಆಗಿದೆ.
ಸೌತೆಕಾಯಿ ತಂಪಾಗಿಸುವ ಪರಿಣಾಮ ಹೊಂದಿದ್ದು ಚರ್ಮದ ಕಿರಿಕಿರಿ ಹೋಗಲಾಡಿಸಲು ಸಹಕಾರಿ ಆಗಿದೆ.
ಸೌತೆಕಾಯಿಯ ಲೇಪನ ಬಳಸುವುದರಿಂದ ಸನ್ ಟ್ಯಾನ್ ಸಮಸ್ಯೆಯನ್ನು ನಿವಾರಿಸುತ್ತದೆ.
ಸೌತೆಕಾಯಿಯಲ್ಲಿರುವ ಆ್ಯಂಟಿಆಕ್ಸಿಡೆಂಟ್‌ಗಳು ಚರ್ಮವನ್ನು ಸ್ವತಂತ್ರ ರಾಡಿಕಲ್‌ಗಳಿಂದ ರಕ್ಷಿಸಿ ಆ್ಯಂಟಿ ಏಜಿಂಗ್ ಲಕ್ಷಣಗಳನ್ನು ಕಡಿಮೆ ಮಾಡಲು ಸಹಕಾರಿ ಆಗಿದೆ.
ಸೌತೆಕಾಯಿಯು ನೈಸರ್ಗಿಕ ಸಂಕೋಚಕ ಗುಣಗಳನ್ನು ಹೊಂದಿದ್ದು ಇದು ಚರ್ಮದ ರಂಧ್ರಗಳನ್ನು ಬಿಗಿಗೊಳಿಸಲು ಮತ್ತು ಟೋನ್ ಮಾಡುವಲ್ಲಿ ಪರಿಣಾಮಕಾರಿ ಆಗಿದೆ.
ಸೌತೆಕಾಯಿಯನ್ನು ರೌಂಡ್ ಆಗಿ ಕತ್ತರಿಸಿ ಕಣ್ಣುಗಳ ಮೇಲೆ ಇಡುವುದರಿಂದ ಇದು ಡಾರ್ಕ್ ಸರ್ಕಲ್‌ಗಳನ್ನು ಕಡಿಮೆ ಮಾಡಲು ಸಹಕಾರಿ ಆಗಿದೆ.
ಸೌತೆಕಾಯಿಯಲ್ಲಿ ಉರಿಯೂತದ ಲಕ್ಷಣಗಳನ್ನು ಹೊಂದಿದ್ದು ಮುಖದಲ್ಲಿ ಮೊಡವೆ ಮತ್ತದರ ಕಲೆಗಳನ್ನು ನಿವಾರಿಸಲು ಪರಿಣಾಮಕಾರಿ ಆಗಿದೆ.
ನಿಯಮಿತ ಸೌತೆಕಾಯಿ ಬಳಕೆಯಿಂದ ಚರ್ಮದ ಟೋನ್ ಸರಿದೂಗಿಸಿ ತ್ವಚೆಗೆ ಕಾಂತಿಯನ್ನು ನೀಡುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.