ಬೆಳಿಗ್ಗೆ ಎದ್ದ ಒಡನೇ ವ್ಯಾಯಾಮ ಮಾಡಿ. ಇದು ನಿಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ಬೆಳಗ್ಗೆ ಎದ್ದಾಗ ಚಹಾ ಮತ್ತು ಕಾಫಿಯ ಬದಲಿಗೆ ಒಂದು ಲೋಟ ನೀರು ಕುಡಿದರೆ ಅನೇಕ ರೋಗಗಳು ದೂರವಾಗುತ್ತವೆ. ಇದು ನಿಮ್ಮ ದಿನವನ್ನು ಚೈತನ್ಯವಾಗಿರುವಂತೆ ಮಾಡುತ್ತದೆ.
ಸಾಧ್ಯವಾದಷ್ಟು ಬೆಳಿಗ್ಗೆ ತಂಪಾದ ನೀರಿನಿಂದ ಸ್ನಾನ ಮಾಡಿ. ಇದು ನಿಮಗೆ ಫ್ರೆಶ್‌ನೆಸ್ ನೀಡುತ್ತದೆ.
ಬೆಳಗ್ಗೆ ಬೇಗ ಏಳುವುದರಿಂದ ದಿನವಿಡೀ ನೀವು ಚೈತನ್ಯದಿಂದ ಇರುತ್ತೀರಿ. ರಾತ್ರಿ ಬೇಗ ಮಲಗಿ, ಮುಂಜಾನೆ ಬೇಗ ಎಚ್ಚರವಾಗಿ ಇದು ತುಂಬಾ ಒಳ್ಳೆಯದು.
ಎಷ್ಟೇ ಕೆಲಸ ಇದ್ದರೂ ಬೆಳಗ್ಗೆ ಆಹಾರ ಸೇವಿಸಿ. ಏಕೆಂದರೆ ಈ ಉಪಹಾರವು ನಿಮ್ಮನ್ನು ದಿನವಿಡೀ ಶಕ್ತಿಯುತವಾಗಿರಿಸುತ್ತದೆ.
ಬೆಳಿಗ್ಗೆ ಸ್ವಲ್ಪ ಹೊತ್ತು ಬಿಸಿಲಿನಲ್ಲಿ ಕುಳಿತುಕೊಳ್ಳಿ. ಇದು ನಿಮಗೆ ಅಗತ್ಯವಿರುವ ವಿಟಮಿನ್ ಡಿ ನೀಡುತ್ತದೆ. ಮತ್ತು ನೀವು ಶಕ್ತಿಯುತವಾಗಿರಲು ಸಹಾಯ ಮಾಡುತ್ತದೆ.