ಹೆಚ್ಚಿನವರು ದಿನದ ಆರಂಭವನ್ನು ಚಹಾ ಅಥವಾ ಕಾಫಿಯೊಂದಿಗೆ ಮಾಡುತ್ತಾರೆ. ಇನ್ನು ಕೆಲವರು ಆರೋಗ್ಯಕರ ಪಾನೀಯಗಳ ಮೂಲಕವೂ ದಿನ ಆರಂಭಿಸುತ್ತಾರೆ.
ಖಾಲಿ ಹೊಟ್ಟೆಯಲ್ಲಿ ನೆಲ್ಲಿ ಕಾಯಿ ಜ್ಯೂಸ್ ಕುಡಿಯುವುದು ಕೂಡಾ ಬಹಳ ಪ್ರಯೋಜನಕಾರಿ.
ನೆಲ್ಲಿಕಾಯಿ ಅನೇಕ ಆರೋಗ್ಯ ಗುಣಗಳನ್ನು ಹೊಂದಿರುವ ಸೂಪರ್ ಫುಡ್ ಆಗಿದೆ. ಆಯುರ್ವೇದ ಔಷಧಿಗಳಲ್ಲಿ ಇದನ್ನೂ ಹೆಚ್ಚಾಗಿ ಬಳಸುತ್ತಾರೆ.
ನೆಲ್ಲಿಕಾಯಿಯಲ್ಲಿ ವಿಟಮಿನ್ ಎ, ವಿಟಮಿನ್ ಬಿ, ಕ್ಯಾಲ್ಷಿಯಂ, ಪೊಟ್ಯಾಷಿಯಂ, ಮೆಗ್ನಿಶಿಯಂ, ಐರನ್, ಆಂಟಿ ಆಕ್ಸಿಡೆಂಟ್ ಮತ್ತು ಉತ್ತಮ ಫೈಬರ್ ಸೇರಿದೆ.
ರೋಗ ನಿರೋಧಕ ಶಕ್ತಿ ಹೆಚ್ಚಿಸಲು ನೆಲ್ಲಿ ಕಾಯಿ ಜ್ಯೂಸ್ ಅನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು.
ಜೀರ್ಣಕಾರಿ ಸಮಸ್ಯೆ ಇದ್ದರೂ ನೆಲ್ಲಿ ಕಾಯಿ ಜ್ಯೂಸ್ ರಾಮಬಾಣವಾಗಿ ಕೆಲಸ ಮಾಡುತ್ತದೆ.
ಫಿಟ್ ಮತ್ತು ಸ್ಲಿಂ ಆಗಬೇಕಾದರೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಜ್ಯೂಸ್ ಕುಡಿಯಬೇಕು.
ನೆಲ್ಲಿಕಾಯಿಯಲ್ಲಿ ಐರನ್ ಮತ್ತು ವಿಟಮಿನ್ ಸಿ ಹೇರಳವಾಗಿ ಇರುತ್ತದೆ. ಹಿಮೊಗ್ಲೋಬಿನ್ ಕೊರತೆ ನೀಗಿಸುತ್ತದೆ .
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಕೆಲವು ಸಂಶೋಧನೆ ಹಾಗೂ ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.