ಕೂದಲು ಉದುರುವುದನ್ನು ತಡೆಯಲು ಈ ಮನೆಮದ್ದುಗಳಿಗೆ ಸರಿಸಾಟಿ ಬೇರೇನೂ ಇಲ್ಲ!

Yashaswini V
Sep 18,2024

ಕೂದಲು ಉದುರುವಿಕೆ

ಕೂದಲು ಉದುರುವಿಕೆಗೆ ದೈಹಿಕ ಆರೋಗ್ಯದ ಜೊತೆಗೆ ಬಾಹ್ಯ ಅಂಶಗಳು ಕೂಡ ಕಾರಣ.

ಹೇರ್ ಫಾಲ್ ಮನೆಮದ್ದು

ಹೇರ್ ಫಾಲ್/ಕೂದಲು ಉದುರುವಿಕೆ ಸಮಸ್ಯೆಗೆ ಸಾಂಪ್ರದಾಯಿಕ ಮನೆಮದ್ದುಗಳಿಗೆ ಸರಿಸಾಟಿ ಬೇರಾವುದೂ ಇಲ್ಲ.

ನೆಲ್ಲಿ ಕಾಯಿ

ನೆಲ್ಲಿಕಾಯಿಗಳಲ್ಲಿರುವ ಉತ್ಕರ್ಷಣ ನಿರೋಧಕ, ವಿಟಮಿನ್ ಸಿ ಕೂದಲ ಕಿರು ಚೀಲಗಳಿಗೆ ಅಗತ್ಯ ಪೋಷಕಾಂಶಗಳನ್ನು ಒದಗಿಸುವ ಮೂಲಕ ಹೇರ್ ಫಾಲ್ ತಡೆಯುತ್ತದೆ.

ಈರುಳ್ಳಿ ರಸ

ಈರುಳ್ಳಿಯು ಸಲ್ಫರ್‌ನ ಸಮೃದ್ಧ ಮೂಲವಾಗಿದ್ದು ಇದು ಕಾಲಜಿನ್ ಉತ್ಪಾದಿಸುವ ಮೂಲಕ ಕೂದಲುದುರುವಿಕೆಗೆ ತ್ವರಿತ ಪರಿಹಾರ ನೀಡುತ್ತದೆ.

ಶುದ್ಧ ತೆಂಗಿನೆಣ್ಣೆ

ಶುದ್ಧ ತೆಂಗಿನ ಎಣ್ಣೆಯಲ್ಲಿ ಕೂದಲಿಗೆ ಅಗತ್ಯವಾದ ಆರೋಗ್ಯಕರ ಕೊಬ್ಬುಗಳು, ಪ್ರೋಟೀನ್ಗಳು ಮತ್ತು ಖನಿಜಗಳು ಹೇರಳವಾಗಿವೆ. ಇದರ ಬಳಕೆಯಿಂದ ಹೇರ್ ಫಾಲ್ ನಿವಾರಿಸಬಹುದು.

ಅಲೋವೆರಾ

ತಾಜಾ ಅಲೋವೆರಾ ಜೆಲ್‌ನಲ್ಲಿರುವ ಕಿಣ್ವಗಳು ಹೇರ್ ಫಾಲ್ ನಿವಾರಣೆಗೆ ಪರಿಣಾಮಕಾರಿ ನೈಸರ್ಗಿಕ ಚಿಕಿತ್ಸೆಯಾಗಿದೆ.

ಬೀಟ್ರೂಟ್ ಜ್ಯೂಸ್

ಪ್ರೋಟೀನ್, ಪೊಟ್ಯಾಸಿಯಮ್, ರಂಜಕ, ಕ್ಯಾಲ್ಸಿಯಂ, ಬಿ ಜೀವಸತ್ವಗಳಿಂದ ಸಮೃದ್ಧವಾಗಿರುವ ಬೀಟ್ರೂಟ್ ರಸವು ಹೇರ್ ಫಾಲ್ ನಿವಾರಿಸಿ, ನೆತ್ತಿಯನ್ನೂ ಆರೋಗ್ಯವಾಗಿರಿಸುತ್ತದೆ.

ಮೇಥಿ ಮಾಸ್ಕ್

ತಿಂಗಳಲ್ಲಿ ಒಮ್ಮೆಯಾದರೂ ನೆನೆಸಿಟ್ಟ ಮೆಂತ್ಯವನ್ನು ರುಬ್ಬಿ ಕೂದಲಿಗೆ ಮಾಸ್ಕ್ ಆಗಿ ಬಳಸುವುದರಿಂದ ಹೇರ್ ಫಾಲ್ ನಿವಾರಣೆಯಾಗಿ, ಕೂದಲಿನ ಕಿರುಚೀಲಗಳನ್ನು ಸರಿಪಡಿಸಲು ಸಹಾಯಕವಾಗುತ್ತದೆ.

ಸೂಚನೆ

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story