ಮೊಟ್ಟೆ ಆರೋಗ್ಯಕ್ಕೆ ಒಳ್ಳೆಯದು ಎಂದು ತಿಳಿದಿರಬಹುದು. ಆದರೆ, ಮೊಟ್ಟೆಯಷ್ಟೇ ಅಲ್ಲ ಅದರ ಚಿಪ್ಪೂ ಕೂಡ ಪ್ರಯೋಜನಕಾರಿ ಆಗಿದೆ.
ಮೊಟ್ಟೆಯ ಚಿಪ್ಪಿನ ಬಳಕೆಯಿಂದ ಚರ್ಮಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗಳನ್ನು ನಿವಾರಿಸಬಹುದು ಎಂದು ಹೇಳಲಾಗುತ್ತದೆ.
ಮೊಟ್ಟೆಯ ಚಿಪ್ಪಿನ ಸರಿಯಾದ ಬಳಕೆಯಿಂದ ಚರ್ಮ ಸ್ವಚ್ಛಗೊಳ್ಳುವುದರ ಜೊತೆಗೆ ಇದು ಚರ್ಮಕ್ಕೆ ನೈಸರ್ಗಿಕ ಹೊಳಪನ್ನು ನೀಡುತ್ತದೆ.
ಚರ್ಮದಲ್ಲಿ ಮೂಡಿರುವ ಕಲೆಗಳ ನಿವಾರಣೆಗಾಗಿ ಮೊಟ್ಟೆ ಚಿಪ್ಪನ್ನು ಪುಡಿ ಮಾಡಿ ಇದರಲ್ಲಿ ನಿಂಬೆರಸ ಬೆರೆಸಿ ಹಚ್ಚಿ.
ಮೊಟ್ಟೆಯ ಚಿಪ್ಪಿನಲ್ಲಿ ಎರಡು ಚಮಚ ಜೇನುತುಪ್ಪ ಬೆರೆಸಿ ದಪ್ಪನೆಯ ಪೇಸ್ಟ್ ತಯಾರಿಸಿ, ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ ಹತ್ತು ನಿಮಿಷಗಳ ಬಳಿಕ ತಣ್ಣೀರಿನಿಂದ ಮುಖ ತೊಳೆಯುವುದರಿಂದ ಮುಖದ ಕಾಂತಿ ಹೆಚ್ಚುತ್ತದೆ.
ಮೊಟ್ಟೆಯ ಚಿಪ್ಪನ್ನು ಪುಡಿ ಮಾಡಿ ನಿಯಮಿತವಾಗಿ ಇದರಿಂದ ಹಲ್ಲುಜ್ಜುವುದರಿಂದ ಹಲ್ಲುಗಳು ನೈಸರ್ಗಿಕವಾಗಿ ಬಿಳಿಯಾಗುತ್ತವೆ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.