ವಿರೂಪಾಕ್ಷ ದೇವಸ್ಥಾನ

ವಿಜಯನಗರ ಸಾಮ್ರಾಜ್ಯದಲ್ಲಿ ಹೆಸರುವಾಸಿಯಾಗಿದ್ದ ವಿರೂಪಾಕ್ಷ ದೇವಾಲಯವು ಕರ್ನಾಟಕದ ಜನಪ್ರಿಯ ಹಿಂದೂ ದೇವಾಲಯ ಮಾತ್ರವಲ್ಲದೆ ಕೆಲವು ಐತಿಹಾಸಿಕ ದೇವಾಲಯಗಳಲ್ಲಿ ಒಂದಾಗಿದೆ.

Yashaswini V
Jan 30,2024

ಚೆನ್ನಕೇಶವ ದೇವಾಲಯ

ಯಗಚಿ ನದಿಯ ದಡದಲ್ಲಿ ನೆಲೆಗೊಂಡಿರುವ ಬೇಲೂರಿನ ಚೆನ್ನಕೇಶವ ದೇವಾಲಯವು ಆಧ್ಯಾತ್ಮಿಕತೆ ಮತ್ತು ವಾಸ್ತುಶಿಲ್ಪದ ತೇಜಸ್ಸಿಗೆ ಹೆಸರುವಾಸಿಯಾಗಿದೆ.

ಶೃಂಗೇರಿಯ ಶಾರದಾ ದೇವಿ

ಶೃಂಗೇರಿಯ ಶಾರದಾ ದೇವಿಯು ಪ್ರಮುಖವಾಗಿ ಹಿಂದೂ ಧರ್ಮದ ದೇವತೆಗಳಲ್ಲಿ ಒಂದಾಗಿದ್ದು ಭಕ್ತರ ಗಮನ ಸೆಳೆದಿದೆ.

ಚಾಮುಂಡೇಶ್ವರಿ ದೇವಸ್ಥಾನ

ಮೈಸೂರಿನ ಚಾಮುಂಡೇಶ್ವರಿ ದೇವಿಯನ್ನು ನಾಡದೇವತೆ ಎಂತಲೇ ಕರೆಯಲಾಗುತ್ತದೆ. ದಸರಾ ಹಬ್ಬದ ಸಂದರ್ಭದಲ್ಲಿ ದೇಶ ,ವಿದೇಶಗಳಿಂದಲೂ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ತೆರಳಿ ದೇವಿಯ ದರ್ಶನವನ್ನು ಪಡೆದುಕೊಳ್ಳುತ್ತಾರೆ.

ಮುರುಡೇಶ್ವರ ದೇವಸ್ಥಾನ

ಮೂರು ಕಡೆ ಅರಬ್ಬಿ ಸಮುದ್ರದಿಂದ ಕೂಡಿರುವ ಈ ಮುರುಡೇಶ್ವರ ದೇವಾಲಯವು ಪ್ರಕೃತಿ ಸೌಂದರ್ಯದ ಮೂಲಕ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ. ಈ ದೇವಾಲಯಕ್ಕೆ ಪ್ರತಿದಿನ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ.

ಧರ್ಮಸ್ಥಳದ ಮಂಜುನಾಥೇಶ್ವರ

ಧರ್ಮಸ್ಥಳಕ್ಕೆ ಕರ್ಕಾಟದದಲ್ಲಿರುವ ಪ್ರಸಿದ್ದ ದೇವಾಲಯಗಳಲ್ಲಿ ಒಂದು. ಪ್ರತಿನಿತ್ಯ ಸಾವಿರಾರು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ತೆರಳಿ ಮಂಜುನಾಥೇಶ್ವರನ ದರ್ಶನವನ್ನು ಪಡೆದುಕೊಳ್ಳುತ್ತಾರೆ.

ಕುಕ್ಕೆ ಸುಬ್ರಹ್ಮಣ್ಯ

ಸಾಮಾನ್ಯವಾಗಿ ಸರ್ಪದೋಷವಿದ್ದವರು ಆಶ್ಲೇಷ ಬಲಿ ಪೂಜೆ ಮಾಡಿಸಲು ಹೆಚ್ಚಾಗಿ ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಇದಲ್ಲದೆ, ಇತರ ವಿಶೇಷ ಪೂಜೆಗಳು ಮತ್ತು ಆಚರಣೆಗಳು ನಡೆಯುವುದರಿಂದ ಕುಕ್ಕೆ ಸುಬ್ರಹ್ಮಣ್ಯವನ್ನು ಕರ್ನಾಟಕದಲ್ಲಿ ಪ್ರಸಿದ್ಧ ದೇವಾಲಯಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ.

ಉಡುಪಿ ಶ್ರೀಕೃಷ್ಣ ಮಠ

ಕರ್ನಾಟಕದಲ್ಲಿ ಭೇಟಿ ನೀಡಲೇಬೇಕಾದ ದೇವಾಲಯ ಅಂದರೆ ಶ್ರೀಕೃಷ್ಣ ಮಠ.

VIEW ALL

Read Next Story