ಅಣಬೆ ವಿಧದ ವಿಟಮಿನ್ ಗಳಲ್ಲಿ ಸಮೃದ್ಧವಾಗಿದೆ. ಅದನ್ನು ಸರಿಯಾಗಿ ಸಂಗ್ರಹಿಸುವುದು ಮುಖ್ಯ. ಇಲ್ಲವಾದಲ್ಲಿ ಒಂದೇ ದಿನದೊಳಗೆ ಹಾಳಾಗಬಹುದು.
ಕಾಗದದ ಚೀಲಗಳಲ್ಲಿ ರಂಧ್ರಗಳನ್ನು ಮಾಡಿ ಅದನ್ನು ಫ್ರಿಜ್ ನಲ್ಲಿ ಇರಿಸಬಹುದು. ಹೀಗೆ ಮಾಡಿದರೆ ದೀರ್ಘ ಕಾಲದವರೆಗೆ ಅಣಬೆ ತಾಜಾವಾಗಿರುತ್ತದೆ.
ದೀರ್ಘ ಕಾಲದವರೆಗೆ ಅಣಬೆ ಕೆಡದಂತೆ ಇಡಲು ಅದನ್ನು ಒರಿಜಿನಲ್ ಪ್ಯಾಕಿಂಗ್ ನಲ್ಲಿಯೇ ಇಡಬೇಕು. ಆ ಪ್ಯಾಕಿಂಗ್ ನಲ್ಲಿಕಾರ್ಡ್ ಬೋರ್ಡ್ ಬೇಸ್ ಇರುವುದು ಬಹಳ ಮುಖ್ಯವಾಗಿರುತ್ತದೆ.
ಅಣಬೆಯನ್ನು ತೊಳೆದು ಸ್ವಲ್ಪ ಎಣ್ಣೆಯಲ್ಲಿ ಹಾಕಿ ಹುರಿದು ಫ್ರಿಜ್ ನಲ್ಲಿ ಇಟ್ಟರೂ ಬಹಳ ಬೇಗ ಕೆಡುವುದಿಲ್ಲ.
ಏರ್ ಟೈಟ್ ಡಬ್ಬದಲ್ಲಿ ಟಿಶ್ಯೂ ಹಾಕಿ ಅಣಬೆಯನ್ನು ಶೇಖರಿಸಿ ಇಟ್ಟರೆ ದೀರ್ಘಕಾಲದವರೆಗೆ ಹಾಳಾಗುವುದಿಲ್ಲ.
ಅಣಬೆಯನ್ನು ಯಾವತೂ ಕ್ರಿಸ್ಪರ್ ಡ್ರಾಯರ್ ನಲ್ಲಿ ಸ್ಟೋರ್ ಮಾಡಬಾರದು. ಹೀಗೆ ಮಾಡಿದರೆ ಭಾಲ್ ಬೇಗನೆ ಹಾಳಾಗುತ್ತದೆ.
ಆಹಾರಗಳ ಜೊತೆಯಲ್ಲಿ ಅಣಬೆಯನ್ನು ಇಡಬಾರದು. ಹೀಗೆ ಮಾಡಿದರೆ ಅಣಬೆ ಬೇರೆ ಆಹಾರಗಳ ಘಮವನ್ನು ಸೆಳೆದುಕೊಳ್ಳುತ್ತದೆ. ಇದರಿಂದ ಅದರ ರುಚಿ ಕೆಡುತ್ತದೆ.
ಅಣಬೆಯನ್ನು ಸ್ಟೋರ್ ಮಾಡುವ ಮುನ್ನ ಅದನ್ನು ಚೆನ್ನಾಗಿ ತೊಳೆದು ಒಣಗಿಸಬೇಕು ಎನ್ನುವುದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.