ಚಿಕ್ಕಬಳ್ಳಾಪುರದಲ್ಲಿರುವ ಪ್ರಸಿದ್ಧ ಪ್ರವಾಸಿ ತಾಣಗಳು
ಚಿಕ್ಕಬಳ್ಳಾಪುರ ಅಂದರೇನೆ ಬೆಟ್ಟಗಳ ಸ್ವರ್ಗ ಅನ್ನಬಹುದು. ಇಲ್ಲಿಗೆ ಪಯಣ ಮಾಡುತ್ತಿರುವಾಗ ದೂರದಿಂದಲೇ ಚಿಕ್ಕ ಚಿಕ್ಕ ಬೆಟ್ಟಗಳು ಕಾಣುತ್ತವೆ. ಇಲ್ಲಿನ ಪ್ರಸಿದ್ಧ ಬೆಟ್ಟಗಳ ದೃಶ್ಯವನ್ನು ಕಣ್ತುಂಬಿಕೊಳ್ಳಲು ನೀವು ಬಯಸಿದರೆ ಚಿಕ್ಕಬಳ್ಳಾಪುರದಲ್ಲಿರುವ ಪ್ರಸಿದ್ಧ ಪ್ರವಾಸಿ ತಾಣಗಳ ಬಗ್ಗೆ ಇಲ್ಲಿದೆ ಮಾಹಿತಿ.
ಪ್ರಕೃತಿ ಸೌಂದರ್ಯವನ್ನು ಇಷ್ಟಪಡುವವರಿಗೆ ನಂದಿ ಗಿರಿಧಾಮ ಅತ್ಯುತ್ತಮ ಪ್ರವಾಸಿ ತಾಣ.
ಈ ಬೆಟ್ಟವು ನಂದಿಬೆಟ್ಟದ ಸಮೀಪದಲ್ಲಿಯೇ ಕಾಣುವ ಪುಟ್ಟ ಗಿರಿಧಾಮವಾಗಿದ್ದು, ಈ ತಾಣ ಸಂಪೂರ್ಣ ಹಸಿರುಮಯವಾಗಿದೆ.
ನಂದಿ ಬೆಟ್ಟಕ್ಕೆ ತೆರಳುವ ರಸ್ತೆಯ ಹಾದಿಯಲ್ಲೇ ಸಿಗುವ ನಂದಿ ಗ್ರಾಮದ ಭೋಗನಂದೀಶ್ವರ ದೇವಾಲಯವು ತುಂಬಾ ಪ್ರಸಿದ್ಧಿ ಪಡೆದುಕೊಂಡಿದೆ.
ಚಿಕ್ಕಬಳ್ಳಾಪುರದಲ್ಲಿರುವ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಸ್ಕಂದಗಿರಿ ಬೆಟ್ಟವೂ ಒಂದು.
ಬೆಂಗಳೂರು ನಗರದಿಂದ ಚಿಕ್ಕಬಳ್ಳಾಪುರದ ಕಡೆಗೆ ತೆರಳಬೇಕಾದರೆ ಮೊದಲಿಗೆ ಸಿಗುವುದೇ ದೇವನಹಳ್ಳಿ ಕೋಟೆ.. ಈ ಕೋಟೆಯು ಐತಿಹಾಸಿಕ ಮಹತ್ವಕ್ಕೆ ಹೆಸರುವಾಸಿಯಾಗಿದೆ. ಇಲ್ಲಿಗೆ ಹೆಚ್ಚಾಗಿ ಸಂದರ್ಶಕರು ಭೇಟಿ ನೀಡಿ ಇತಿಹಾಸವನ್ನು ಮೆಲುಕು ಹಾಕುತ್ತಾರೆ.
ಈ ಗ್ರಾಮವು ಸರ್.ಎಂ ವಿಶ್ವೇಶ್ವರಯ್ಯರವರು ಜನಿಸಿದಂತಹ ಸ್ಥಳ. ಮುದ್ದೇನಹಳ್ಳಿಯಲ್ಲಿ ಜನಪ್ರಿಯ ಸ್ಮಾರಕ ಹಾಗೂ ವಸ್ತುಸಂಗ್ರಹಾಲಯವನ್ನು ನಿರ್ಮಿಸಲಾಗಿದೆ.
ಪ್ರವಾಸ ಎಂದಕೂಡಲೇ ಎಲ್ಲರೂ ನಿರೀಕ್ಷೆ ಮಾಡುವುದೇ ತಣ್ಣನೆಯ ವಾತಾವರಣ. ಜಲಪಾತದ ದೃಶ್ಯದೊಂದಿಗೆ ಶಾಂತಿಯುತ ನೈಸರ್ಗಿಕ ಪರಿಸರವನ್ನು ಆನಂದಿಸಲು ಬಯಸಿದರೆ ವಿವೇಕಾನಂದ ಜಲಪಾತಕ್ಕೆ ಒಮ್ಮೆ ಭೇಟಿ ನೀಡಿ.
ಚಿಕ್ಕಬಳ್ಳಾಪುರದ ಪ್ರವಾಸೋದ್ಯಮದ ಅಂದವನ್ನು ಹೆಚ್ಚಿಸಲು ಬೆಟ್ಟದ ತಪ್ಪಲಿನಲ್ಲಿಆಕರ್ಷಕ ಆದಿಯೋಗಿ ಶಿವನ ಪ್ರತಿಮೆಯನ್ನು ನಿರ್ಮಿಸಲಾಗಿದೆ. ಪ್ರತಿಮೆಯು 112 ಅಡಿ ಎತ್ತರ, 82 ಅಡಿ ಅಗಲ ಹಾಗು 147 ಅಡಿ ಉದ್ದವಿದೆ. ಮಹಾಶಿವರಾತ್ರಿ ಹಬ್ಬದ ಸಂದರ್ಭದಲ್ಲಿ ಶಿವನ ಭಕ್ತರು ಇಲ್ಲಿಗೆ ಹೆಚ್ಚಾಗಿ ಭೇಟಿ ನೀಡುತ್ತಾರೆ.