ಚಳಿಗಾಲದಲ್ಲಿ 'ಅಗಸೆ ಬೀಜ'ಗಳನ್ನು ಹೀಗೆ ಬಳಸಿ ನೀಳ ಕೇಶರಾಶಿ ನಿಮ್ಮದಾಗಿಸಿ...!

Yashaswini V
Nov 25,2024

ಉದ್ದ ಕೂದಲು

ಉದ್ದನೆಯ ಸುಂದರ ಕೇಶರಾಶಿ ಹೊಂದಬೇಕು ಎಂಬುದು ಹಲವರ ಕನಸಾಗಿರುತ್ತದೆ.

ಕೂದಲಿನ ಸಮಸ್ಯೆಗಳು

ಸಾಮಾನ್ಯವಾಗಿ ಎಲ್ಲಾ ಋತುಗಳಿಗಿಂತ ಚಳಿಗಾಲದಲ್ಲಿ ತಲೆಹೊಟ್ಟು, ಕೂದಲು ಉದುರುವಿಕೆಯಂತಹ ಕೂದಲಿನ ಸಮಸ್ಯೆಗಳು ಉಲ್ಬಣಿಸುತ್ತವೆ.

ಕೂದಲಿಗೆ ಅಗಸೆಬೀಜ

ಚಳಿಗಾಲದಲ್ಲಿ ಅಗಸೆಬೀಜಗಳ ಬಳಕೆಯಿಂದ ಇದು ನೆತ್ತಿಯನ್ನು ಪೋಷಿಸುವ ಮೂಲಕ ಕೂದಲನ್ನು ಬುಡದಿಂದಲೂ ಬಲಿಷ್ಠಗೊಳಿಸುತ್ತದೆ.

ಕೂದಲಿಗೆ ಹೊಳಪು

ಅಗಸೆ ಬೀಜದ ಹೇರ್ ಆಯಿಲ್ ಬಳಕೆಯಿಂದ ಚಳಿಗಾಲದಲ್ಲಿ ನಿರ್ಜೀವದಂತಿರುವ ಕೂದಲಿಗೆ ಮರುಜೀವ ದೊರೆತು ಫಳಫಳ ಹೊಳೆಯುತ್ತದೆ.

ಅಗಸೆಬೀಜದ ಎಣ್ಣೆ

ಅಗಸೆಬೀಜದ ಎಣ್ಣೆಯನ್ನು ಕೂದಲಿಗೆ ಹಚ್ಚಿ ಮಸಾಜ್ ಮಾಡುವುದರಿಂದ ರಕ್ತ ಪರಿಚಲನೆ ಸುಧಾರಿಸಿ ಕೂದಲ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.

ಆಹಾರದಲ್ಲಿ ಅಗಸೆ ಬೀಜ

ಅಗಸೆ ಬೀಜಗಳಲ್ಲಿ ಕೂದಲಿನ ಆರೈಕೆಗೆ ಅಗತ್ಯವಾದ ಒಮೆಗಾ-3, ಪ್ರೊಟೀನ್ ಹೇರಳವಾಗಿದೆ. ಇದನ್ನು ನೀವು ನಿತ್ಯ ಸೇವಿಸುವ ಆಹಾರದಲ್ಲಿ ಸೇರಿಸುವುದರಿಂದ ನೀಳ ಕೂದಲನ್ನು ಹೊಂದಲು ಸಹಕಾರಿ ಆಗಿದೆ.

ಹೇರ್ ಮಾಸ್ಕ್

ವಾರದಲ್ಲಿ ಒಮ್ಮೆ ಅಗಸೆ ಬೀಜದಲ್ಲಿ ಅಲೋವೆರಾ ಜೆಲ್ ಮಿಕ್ಸ್ ಮಾಡಿ ಬಳಸುವುದರಿಂದ ಕೂದಲಿಗೆ ನೈಸರ್ಗಿಕ ಹೊಳಪು ದೊರೆಯುತ್ತದೆ.

ಹೇರ್ ಆಯಿಲ್

ನೀವು ಬಳಸುವ ಹೇರ್ ಆಯಿಲ್ ಜೊತೆ ಅಗಸೆಬೀಜದ ಎಣ್ಣೆಯನ್ನು ಬೆರೆಸಿ ಹಚ್ಚುವುದರಿಂದ ಕೂದಲಿನ ಕಿರು ಚೀಲಗಳನ್ನು ಬಲಪಡಿಸಬಹುದು.

ಸೂಚನೆ

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story