ನೊಣಗಳು ಸಾಮಾನ್ಯವಾಗಿ ಮನೆಗಳಲ್ಲಿ ಕಂಡುಬರುವ ಕೀಟಗಳು. ಎಲ್ಲಿ ಸ್ವಚ್ಛತೆ ಇರುವುದಿಲ್ಲವೋ ಆ ಜಾಗದಲ್ಲಿ ನೊಣಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ನಾವಿಂದು ಇವುಗಳನ್ನು ತೊಡೆದು ಹಾಕುವ ಸುಲಭ ಪರಿಹಾರಗಳನ್ನು ನಿಮಗೆ ತಿಳಿಸಿಕೊಡಲಿದ್ದೇವೆ.
ಕೆಲವು ಸಸ್ಯಗಳಿಂದ ಹೊರಸೂಸುವ ಸುಗಂಧ ಸೊಳ್ಳೆಗಳು ಮತ್ತು ನೊಣಗಳಿಗೆ ಇಷ್ಟವಾಗುವುದಿಲ್ಲ. ಇದೇ ಕಾರಣಕ್ಕೆ ಆ ಗಿಡಗಳನ್ನು ಮನೆಯಲ್ಲಿ ನೆಟ್ಟರೆ ಇಂತಹ ಕೀಟಗಳಿಂದ ದೂರ ಉಳಿಯಬಹುದು.
ಸಿಟ್ರೊನೆಲ್ಲಾ ಎಂಬ ಸಸ್ಯ ಮನೆಯಲ್ಲಿ ನೊಣಗಳ ಕಾಟವನ್ನು ತೊಡೆದು ಹಾಕುತ್ತದೆ. ಇದರಿಂದ ತಯಾರಿಸಲ್ಪಟ್ಟ ಎಣ್ಣೆಯನ್ನೂ ಸಹ ಮೇಣದಲ್ಲಿ ಬೆರೆಸಿ ಬತ್ತಿಗಳನ್ನಾಗಿ ತಯಾರಿಸಿ ಹಚ್ಚಿದರೆ, ನೊಣಗಳು ಬರುವುದಿಲ್ಲ. ಈ ಸಸ್ಯದ ಇನ್ನೊಂದು ಹೆಸರು 'ಒಡೋಮಾಸ್'.
ನೀಲಗಿರಿ ಎಲೆಗಳು ಬಲವಾದ ಪರಿಮಳಕ್ಕೆ ಹೆಸರುವಾಸಿಯಾಗಿದೆ. ಈ ಸಸಿಯನ್ನು ಮನೆಯ ಮುಂಭಾಗ ನೆಟ್ಟರೆ, ನೊಣ, ಸೊಳ್ಳೆಗಳಿಗೆ ಸುಲಭವಾಗಿ ವಿದಾಯ ಹೇಳಬಹುದು.
ಲೆಮೆನ್ ಗ್ರಾಸ್ ಎಂಬುದು ಹೆಸರೇ ಹೇಳುವಂತೆ ನಿಂಬೆ ಪರಿಮಳವನ್ನು ಹೊಂದಿರುತ್ತದೆ. ಇದನ್ನು ಸಿಂಬೊಪೊಗನ್ ಸಿಟ್ರಾಟಸ್ ಎಂದೂ ಕರೆಯುತ್ತಾರೆ. ಈ ಸಸ್ಯಗಳು ಮನೆ ಬಳಿ ಇದ್ದರೆ, ನೊಣಗಳು ಬರುವುದಿಲ್ಲ.
ಲವಂಗದ ಗಿಡ ಅಥವಾ ಮರ ಮನೆ ಬಳಿ ಇದ್ದರೆ, ನೊಣಗಳು ಓಡಿ ಹೋಗುತ್ತವೆ. ಇವಷ್ಟೇ ಅಲ್ಲದೆ, ಈ ಗಿಡ ಮೂಡ್ ರಿಫ್ರೆಶ್ ಮಾಡಲು ಸಹಾಯ ಮಾಡುತ್ತದೆ.
ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee News Kannada ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.