ಫ್ರಿಡ್ಜ್‌ನಲ್ಲಿ ಯಾವ ವಸ್ತುಗಳನ್ನು ಇಡಬೇಕು ಮತ್ತು ಯಾವುದನ್ನು ಇಡಬಾರದು ಎಂಬುದನ್ನು ತಿಳಿಯುವುದು ಮುಖ್ಯ. ಆದರೆ ಅನೇಕರಿಗೆ ಇದರ ಬಗ್ಗೆ ತಿಳಿದಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಕೆಲ ಇದರ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಟೊಮೆಟೋವನ್ನು ಸಹ ರೆಫ್ರಿಜರೇಟರ್ನಲ್ಲಿ ಇಡಬಾರದು. ಫ್ರಿಡ್ಜ್ ನಲ್ಲಿಟ್ಟರೆ ಬೇಗ ಕರಗಿ ರುಚಿಯೂ ಹಾಳಾಗಬಹುದು.
ಬಾಳೆಹಣ್ಣನ್ನು ಫ್ರಿಡ್ಜ್‌ನಲ್ಲಿ ಇಡುವ ಬದಲು, ಅವುಗಳನ್ನು ತೆರೆದ ಸ್ಥಳದಲ್ಲಿ ಇಡಬೇಕು. ಏಕೆಂದರೆ ಬಾಳೆಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟರೆ ಬೇಗ ಕಪ್ಪಾಗಲು ಪ್ರಾರಂಭಿಸುತ್ತವೆ. ಅಷ್ಟೇ ಅಲ್ಲದೆ, ಫ್ರಿಡ್ಜ್‌ನಲ್ಲಿಟ್ಟರೆ ಎಥಿಲೀನ್ ಎಂಬ ಅನಿಲವು ಬಿಡುಗಡೆಯಾಗುತ್ತದೆ.
ಕಾಫಿಯನ್ನು ಫ್ರಿಡ್ಜ್‌ನಲ್ಲಿ ಇಟ್ಟರೆ ಅದರಿಂದ ಬರುವ ಗಾಳಿಯು ಪುಡಿಯನ್ನು ಹಾಳುಮಾಡುತ್ತದೆ. ಆದಷ್ಟು ಇದನ್ನು ಡ್ರೈ ಸ್ಥಳದಲ್ಲಿಯೇ ಇಡಿ.
ಜೇನುತುಪ್ಪವನ್ನು ಸಹ ರೆಫ್ರಿಜರೇಟರ್ನಲ್ಲಿ ಇಡಬಾರದು. ಜೇನುತುಪ್ಪವನ್ನು ಒಂದು ಜಾಡಿಯಲ್ಲಿ ಮುಚ್ಚಿಟ್ಟರೆ, ಅದು ಹಲವು ವರ್ಷಗಳವರೆಗೆ ಇರುತ್ತದೆ. ಒಂದು ವೇಳೆ ಫ್ರಿಡ್ಜ್‌ನಲ್ಲಿಟ್ಟರೆ ಅದು ಗಟ್ಟಿಯಾಗಿ ಕೆಡಲು ಪ್ರಾರಂಭಿಸುತ್ತದೆ.
ಆಲೂಗಡ್ಡೆಯನ್ನು ಫ್ರಿಡ್ಜ್‌ನಲ್ಲಿ ಇಟ್ಟರೆ ಅದರಲ್ಲಿರುವ ಪಿಷ್ಟವು ಸಕ್ಕರೆಯಾಗಿ ಬದಲಾಗುತ್ತದೆ. ಇದು ಆಲೂಗಡ್ಡೆಯ ರುಚಿಯ ಮೇಲೆ ಪರಿಣಾಮ ಬೀರುವುದಲ್ಲದೆ, ಆರೋಗ್ಯಕ್ಕೂ ಭಾರೀ ಅಪಾಯವನ್ನುಂಟು ಮಾಡುತ್ತದೆ.
ಈ ಲೇಖನವು ಸಾಮಾನ್ಯ ಮಾಹಿತಿಗಾಗಿ. ದಯವಿಟ್ಟು ಯಾವುದೇ ಪರಿಹಾರವನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯರನ್ನು ಸಂಪರ್ಕಿಸಿ, ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ