ಮಶ್ರೂಮ್ ಬಯೋಟಿನ್ ನ ಉತ್ತಮ ಮೂಲವಾಗಿದ್ದು ಇದು ಕೂದಲಿನ ಕಿರುಚೀಲಗಳನ್ನು ಬಳಪಡಿಸಿ ಕೂದಲ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.
ಕಡಲೆ, ಬೇಳೆಕಾಳುಗಳು, ರಾಜ್ಮಾದಂತಹ ದ್ವಿದಳ ಧಾನ್ಯಗಳಲ್ಲಿ ಕೂದಲಿನ ಬೆಳವಣಿಗೆಗೆ ಅಗತ್ಯವಾದ ಬಯೋಟಿನ್, ಸತು, ಕಬ್ಬಿಣ, ಪೊಲೆಟ್ ಹೇರಳವಾಗಿದೆ.
ಬಯೋಟಿನ್, ಒಮೆಗಾ-3 ಕೊಬ್ಬಿನಾಮ್ಲಗಳಲ್ಲಿ ಸಮೃದ್ಧವಾಗಿರುವ ಸಾಲ್ಮನ್ ಫಿಶ್ ಸೇವನೆಯಿಂದ ಆರೋಗ್ಯಕರ ಕೂದಲನ್ನು ಹೊಂದಬಹುದು.
ವಿಟಮಿನ್ ಇ, ಆರೋಗ್ಯಕರ ಕೊಬ್ಬು, ಬಯೋಟಿನ್ ನಲ್ಲಿ ಸಮೃದ್ಧವಾಗಿರುವ ಆವಕಾಡೊ ಕೂದಲನ್ನು ಬುಡದಿಂದಲೂ ಪೋಷಿಸಿ ಕೂದಲ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.
ಬೀಟಾ-ಕ್ಯಾರೋಟಿನ್ ನ ಅತ್ಯುತ್ತಮ ಮೂಲವಾಗಿರುವ ಸಿಹಿಗೆಣಸು ನೈಸರ್ಗಿಕವಾಗಿ ನೆತ್ತಿಯನ್ನು ಪೋಷಿಸಿ ಕೂದಲನ್ನು ಬಳಪಡಿಸುತ್ತದೆ. ಮಾತ್ರವಲ್ಲ, ಇದು ಕೂದಲ ಬೆಳವಣಿಗೆಯನ್ನು ಕೂಡ ಹೆಚ್ಚಿಸುತ್ತದೆ.
ಮೊಟ್ಟೆ ಸಹ ಬಯೋಟಿನ್ನ ಅತ್ಯುತ್ತಮ ಮೂಲವಾಗಿದ್ದು ಇದು ಕೆರಾಟಿನ್ ಉತ್ಪಾದನೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಇದರ ಸೇವನೆಯು ಆರೋಗ್ಯಕರ ಕೂದಲ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.
ಬಯೋಟಿನ್, ಐರನ್, ಪೋಲೆಟ್ನಿಂದ ಸಮೃದ್ಧವಾಗಿರುವ ಪಾಲಕ್ ಸೊಪ್ಪನ್ನು ನಿಮ್ಮ ದೈನಂದಿನ ಆಹಾರದ ಭಾಗವಾಗಿಸುವುದರಿಂದ ಇದು ಕೂದಲಿನ ಕಿರುಚೀಲಗಳಿಗೆ ಆಮ್ಲಜನಕವನ್ನು ತಲುಪಿಸಲು ಮತ್ತು ವೇಗವಾಗಿ ಕೂದಲ ಬೆಳವಣಿಗೆಯನ್ನು ಉತ್ತೇಜಿಸಲು ಸಹಕಾರಿ ಆಗಿದೆ.
ಬಾದಾಮಿಯಲ್ಲಿ ಆರೋಗ್ಯಕರ ಕೊಬ್ಬುಗಳು, ಮೆಗ್ನೀಸಿಯಮ್, ವಿಟಮಿನ್ ಇ ಜೊತೆಗೆ ಬಯೋಟಿನ್ ಹೆರಳವಾಗಿದೆ. ಇದು ಕೂದಲು ಉದುರುವಿಕೆಯನ್ನು ತಡೆದು ಕೂಲಿನ ಬೆಳವಣಿಗೆಗೆ ಪ್ರಯೋಜನಕಾರಿ ಆಗಿದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.