ರವೆಯಲ್ಲಿ ಕರ್ಪೂರವನ್ನು ಬೆರೆಸಿ ಇಡುವುದರಿಂದ. ಎಲ್ಲಾ ಕೀಟಗಳು ರವೆಯಿಂದ ದೂರ ಉಳಿಯುತ್ತದೆ.
ರವೆಯನ್ನು ಉರಿದು ಇಡುವುದರಿಂದ ಕೀಟಗಳನ್ನು ದೂರವಿಡಬಹುದು. ಇದು ದೀರ್ಘಕಾಲ ರವೆ ಉಳಿಯುವಂತೆ ಮಾಡುತ್ತದೆ .
ಒಣಗಿದ ಬೇವಿನ ಎಲೆಗಳನ್ನು ರವೆಯಲ್ಲಿ ಸೇರಿಸುವುದರಿಂದ. ಕೀಟಗಳನ್ನು ದೂರವಿಡಬಹುದು.
ರವೆಯನ್ನು ಕ್ಯಾನಲ್ಲಿ ತುಂಬಿ ಫ್ರಿಜ್ ನಲ್ಲಿ ಇಡುವ ಮೂಲಕ ದೀರ್ಘಕಾಲದವರೆಗೆ ಕೀಟಗಳು ಬೀಳದಂತೆ ರವೆಯನ್ನು ಕಾಪಾಡಬಹುದು.
ರವೆಯನ್ನು ಕನಿಷ್ಠ 2 ರಿಂದ 3 ಗಂಟೆಗಳ ಕಾಲ ಪ್ರಕಾಶಮಾನವಾದ ಬಿಸಿಲಿನಲ್ಲಿ ಇಡುವುದರಿಂದ ಎಲ್ಲಾ ಕೀಟಗಳು ಓಡಿಹೋಗುತ್ತವೆ.
ಬೇ ಎಲೆ ಅಥವಾ ಪುಲಾವ್ ಎಲೆಯ ಪರಿಮಳದಿಂದ ರವೆಯಲ್ಲಿ ಕೀಟಗಳು ಬೀಳುವುದಿಲ್ಲ.
ರವೆಯನ್ನ ಸಂಗ್ರಹಿಸುವಾಗ ಪುದೀನಾ ಎಲೆಗಳನ್ನು ಬಾಕ್ಸಲ್ಲಿ ಇಡಿ. ಇದು ರವೆಯಲ್ಲಿ ಕೀಟಗಳು ಬರದಂತೆ ತಡೆಯುತ್ತದೆ.