ರವೆಯಲ್ಲಿ ಕೀಟಗಳಿವೆಯಾ? ಹಾಗಾದರೆ ಅದನ್ನ ತಡೆಯೋದು ಹೇಗೆ?

ಕರ್ಪೂರ

ರವೆಯಲ್ಲಿ ಕರ್ಪೂರವನ್ನು ಬೆರೆಸಿ ಇಡುವುದರಿಂದ. ಎಲ್ಲಾ ಕೀಟಗಳು ರವೆಯಿಂದ ದೂರ ಉಳಿಯುತ್ತದೆ.

ರವೆಯನ್ನು ಹುರಿಯಿರಿ

ರವೆಯನ್ನು ಉರಿದು ಇಡುವುದರಿಂದ ಕೀಟಗಳನ್ನು ದೂರವಿಡಬಹುದು. ಇದು ದೀರ್ಘಕಾಲ ರವೆ ಉಳಿಯುವಂತೆ ಮಾಡುತ್ತದೆ .

ಬೇವಿನ ಎಲೆಗಳು

ಒಣಗಿದ ಬೇವಿನ ಎಲೆಗಳನ್ನು ರವೆಯಲ್ಲಿ ಸೇರಿಸುವುದರಿಂದ. ಕೀಟಗಳನ್ನು ದೂರವಿಡಬಹುದು.

ಫ್ರಿಜ್‌ನಲ್ಲಿ ಇರಿಸಿ

ರವೆಯನ್ನು ಕ್ಯಾನಲ್ಲಿ ತುಂಬಿ ಫ್ರಿಜ್ ನಲ್ಲಿ ಇಡುವ ಮೂಲಕ ದೀರ್ಘಕಾಲದವರೆಗೆ ಕೀಟಗಳು ಬೀಳದಂತೆ ರವೆಯನ್ನು ಕಾಪಾಡಬಹುದು.

ಬಿಸಿಲಿನಲ್ಲಿ ಇರಿಸಿ

ರವೆಯನ್ನು ಕನಿಷ್ಠ 2 ರಿಂದ 3 ಗಂಟೆಗಳ ಕಾಲ ಪ್ರಕಾಶಮಾನವಾದ ಬಿಸಿಲಿನಲ್ಲಿ ಇಡುವುದರಿಂದ ಎಲ್ಲಾ ಕೀಟಗಳು ಓಡಿಹೋಗುತ್ತವೆ.

ಪುಲಾವ್ ಎಲೆ

ಬೇ ಎಲೆ ಅಥವಾ ಪುಲಾವ್ ಎಲೆಯ ಪರಿಮಳದಿಂದ ರವೆಯಲ್ಲಿ ಕೀಟಗಳು ಬೀಳುವುದಿಲ್ಲ.

ಪುದೀನಾ ಎಲೆ

ರವೆಯನ್ನ ಸಂಗ್ರಹಿಸುವಾಗ ಪುದೀನಾ ಎಲೆಗಳನ್ನು ಬಾಕ್ಸಲ್ಲಿ ಇಡಿ. ಇದು ರವೆಯಲ್ಲಿ ಕೀಟಗಳು ಬರದಂತೆ ತಡೆಯುತ್ತದೆ.

VIEW ALL

Read Next Story