ಇಂದಿನ ಜೀವನಶೈಲಿ, ಆಹಾರ ಪದ್ಧತಿ ಮತ್ತು ಹೆಚ್ಚುತ್ತಿರುವ ಮಾಲಿನ್ಯವು ಆರೋಗ್ಯದ ಮೇಲೆ ಮತ್ತು ಕೂದಲಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಈ ಕಾರಣದಿಂದಾಗಿ, ಕೂದಲು ತೆಳ್ಳಗೆ, ಬಿಳಿಯಾಗುವುದು, ತಲೆಹೊಟ್ಟು ಮತ್ತು ಜಿಡ್ಡಿನಂತೆ ಕಾಣುತ್ತದೆ.
ಹೀಗಿರುವಾಗ ಟೊಮೆಟೊ ಹೇರ್ ಮಾಸ್ಕ್ ಬಳಕೆ ಮಾಡುವ ಮೂಲಕ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಪಡೆಯಬಹುದು.
ಟೊಮೆಟೊದಲ್ಲಿ ವಿಟಮಿನ್ ಸಿ ಯಂತಹ ಆಂಟಿ ಆಕ್ಸಿಡೆಂಟ್‌ಗಳು ಸಮೃದ್ಧವಾಗಿವೆ. ಕೂದಲಿನಲ್ಲಿ ನೈಸರ್ಗಿಕ ಕಾಲಜನ್ ಬೂಸ್ಟರ್ ಆಗಿ ಕೆಲಸ ಮಾಡಲು ಇದು ಸಹಾಯಕ. ಇದಷ್ಟೇ ಅಲ್ಲದೆ, ಕೂದಲನ್ನು ಬಲಪಡಿಸುತ್ತದೆ. ಬೆಳವಣಿಗೆಯನ್ನು ಹೆಚ್ಚಿಸಲು ಸಹ ಈ ಹೇರ್ ಮಾಸ್ಕ್‌ನ್ನು ಬಳಕೆ ಮಾಡಬಹುದು.
ಟೊಮೆಟೊ ಹೇರ್ ಮಾಸ್ಕ್ ತಯಾರಿಸಲು ಟೊಮೆಟೊವನ್ನು ಚೆನ್ನಾಗಿ ರುಬ್ಬಿ ರಸ ತೆಗೆಯಿರಿ. ಅದಕ್ಕೆ ನೀರು ಬೆರೆಸಿ ತೆಳು ಹದ ಬರುವಂತೆ ಮಾಡಿ. ಈಗ ಹೇರ್ ಮಾಸ್ಕ್ ಸಿದ್ಧವಾಗಿದೆ.
ಈ ಹೇರ್ ಮಾಸ್ಕ್ ತೆಗೆದುಕೊಂಡು ಅದನ್ನು ನೆತ್ತಿಯ ಮೇಲೆ ಚೆನ್ನಾಗಿ ಹಚ್ಚಿಕೊಳ್ಳಿ. ನಂತರ ಸ್ವಲ್ಪ ಸಮಯ ಚೆನ್ನಾಗಿ ಮಸಾಜ್ ಮಾಡಿ, 10 ನಿಮಿಷಗಳ ಕಾಲ ಹಾಗೆ ಬಿಡಿ. ಆ ಬಳಿಕ ಸೌಮ್ಯವಾದ ಶಾಂಪೂ ಸಹಾಯದಿಂದ ಕೂದಲನ್ನು ಸ್ವಚ್ಛಗೊಳಿಸಿ. ಇದು ನಿಮ್ಮ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.
ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ದಯವಿಟ್ಟು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.