ಕೆಲವರಿಗೆ ಮೊಣಕೈಯಲ್ಲಿ ಕಪ್ಪು ಕಲೆಗಳು ಕಾಣಿಸಿಕೊಳ್ಳುತ್ತದೆ. ಇದಕ್ಕೆ ಹಲವು ಕಾರಣಗಳಿವೆ. ಆದರೆ, ಕೆಲವು ಪರಿಣಾಮಕಾರಿ ಮನೆಮದ್ದುಗಳ ಸಹಾಯದಿಂದ ಈ ಸಮಸ್ಯೆಯಿಂದ ಸುಲಭವಾಗಿ ಪರಿಹಾರ ಪಡೆಯಬಹುದು.

ಆಪಲ್ ವಿನೆಗರ್

2 ಚಮಚ ಆಪಲ್ ವಿನೆಗರ್ ಮತ್ತು 2 ಚಮಚ ನೀರನ್ನು ಮಿಶ್ರಣ ಮಾಡಿ. ಅದನ್ನು ಹತ್ತಿಯ ಸಹಾಯದಿಂದ ಮೊಣಕೈಗೆ ಹೆಚ್ಚಿ, ಬಳಿಕ ನೀರಿನಿಂದ ತೊಳೆಯಿರಿ. ನಿಯಮಿತವಾಗಿ ಈ ರೀತಿ ಮಾಡುವುಯರಿಂದ ಮೊಣಕೈಗಳ ಕಪ್ಪು ಕಲೆ ನಿವಾರಣೆ ಆಗುತ್ತದೆ.

ನಿಂಬೆಹಣ್ಣು

ನೈಸರ್ಗಿಕ ಬ್ಲೀಚ್ ಎಂದೂ ಪ್ರಸಿದ್ದಿಯಾಗಿರುವ ನಿಂಬೆಹಣ್ಣನ್ನು ಕೂಡ ಪೀಡಿತ ಪ್ರದೇಶಕ್ಕೆ ಅನ್ವಯಿಸಿ ಬಳಿಕ ಶುದ್ಧ ನೀರಿನಿಂದ ತೊಳೆಯಿರಿ. ಇದರಿಂದಲೂ ಮೊಣಕೈ ಕಪ್ಪು ಕಲೆಯೂ ನಿವಾರಣೆಯಾಗುತ್ತದೆ.

ಬಾದಾಮಿ ಎಣ್ಣೆ

ಬಾದಾಮಿ ಎಣ್ಣೆಯಲ್ಲಿ ವಿಟಮಿನ್ ಇ ಸಮೃದ್ಧವಾಗಿದೆ, ಇದು ಕಪ್ಪು ಮೊಣಕಾಲುಗಳು ಮತ್ತು ಮೊಣಕೈಗಳ ಸಮಸ್ಯೆಯನ್ನು ತೆಗೆದುಹಾಕುವಲ್ಲಿ ಪರಿಣಾಮಕಾರಿ ಎಂದು ಹೇಳಲಾಗುತ್ತದೆ.

ಆಲೂಗಡ್ಡೆ ರಸ

ಆಲೂಗೆಡ್ಡೆ ರಸವನ್ನು ಪ್ರತಿನಿತ್ಯ ಮೊಣಕೈಯ ಕಪ್ಪು ಪೀಡಿತ ಪ್ರದೇಶಕ್ಕೆ ಹಚ್ಚುವುದರಿಂದ ಕಪ್ಪು ಕಲೆಯನ್ನು ಹೋಗಲಾಡಿಸಬಹುದು.

ಬೇಕಿಂಗ್ ಸೋಡಾ

ಹಾಲಿನಲ್ಲಿ ಬೇಕಿಂಗ್ ಸೋಡಾವನ್ನು ಬೆರೆಸಿ ಪೇಸ್ಟ್ ತಯಾರಿಸಿ ಈ ಪೇಸ್ಟ್ ಅನ್ನು ಮೊಣಕೈಯ ಕಪ್ಪುಬಣ್ಣದ ಮೇಲೆ ಉಜ್ಜಿಕೊಳ್ಳಿ. ಬಳಿಕ ಶುದ್ಧ ನೀರಿನಿಂದ ವಾಶ್ ಮಾಡಿ. ಇದರಿಂದಲೂ ನಿಮ್ಮ ಸಮಸ್ಯೆಗೆ ಪರಿಹಾರ ಪಡೆಯಬಹುದು.

ಅಲೋವೆರಾ

ಅರಿಶಿನ, ಅಲೋವೆರಾ ಜೆಲ್ ಮತ್ತು ಹಾಲನ್ನು ಜೇನುತುಪ್ಪದೊಂದಿಗೆ ಬೆರೆಸಿ ಮೊಣಕೈಗೆ ಹಚ್ಚಿ ಒಂದು ಗಂಟೆ ಬಳಿಕ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. ವಾರಕ್ಕೊಮ್ಮೆ ಹೀಗೆ ಮಾಡುವುದರಿಂದ ನಿಮ್ಮ ಸಮಸ್ಯೆ ಸುಲಭವಾಗಿ ಬಗೆಹರಿಯುತ್ತದೆ.

ಕರಿಬೇವಿನ ಸೊಪ್ಪು

ಕರಿಬೇವಿನ ಎಲೆಗಳನ್ನು ತೊಳೆದು ನಿಂಬೆ ರಸದೊಂದಿಗೆ ರುಬ್ಬಿ ಈ ಪೇಸ್ಟ್ ಅನ್ನು ಮೊಣಕೈ ಕಪ್ಪು ಕಲೆಯ ಮೇಲೆ ಲೇಪಿಸಿ. ಬಳಿಕ ತಣ್ಣೀರಿನಿಂದ ತೊಳೆಯಿರಿ. ಇದರಿಂದ ಕಪ್ಪು ಕಲೆಗಳು ಮಾಯವಾಗುತ್ತವೆ.

ಮೊಸರು

ಸ್ವಲ್ಪ ಗಟ್ಟಿ ಮೊಸರನ್ನು ತೆಗೆದುಕೊಂಡು ಅದನ್ನು ಮೊಣಕೈಯ ಕಪ್ಪು ಕಲೆ ಇರುವ ಜಾಗದಲ್ಲಿ ಹಚ್ಚಿ ಮಸಾಜ್ ಮಾಡಿ. ಬಳಿಕ ಬೆಚ್ಚಗಿನ ನೀರಿನಿಂದ ವಾಚ್ ಮಾಡಿ. ನಿಯಮಿತವಾಗಿ ಈ ರೀತಿ ಮಾಡುತ್ತಾ ಬಂದರೆ ನಿಮ್ಮ ಸಮಸ್ಯೆಗೆ ಸುಲಭ ಪರಿಹಾರ ಪಡೆಯಬಹುದು.

ಅರಿಶಿನ

ಮೊಣಕೈ ನ ಕಪ್ಪು ಕಲೆ ಪೀಡಿತ ಪ್ರದೇಶಕ್ಕೆ ಅರಿಶಿನದ ಪೇಸ್ಟ್ ಹಚ್ಚುವುದರಿಂದಲೂ ಕಪ್ಪು ಕಲೆಯನ್ನು ನಿವಾರಿಸಬಹುದು.

ಸೌತೆಕಾಯಿ

ಸೌತೆಕಾಯಿಯು ಚರ್ಮದ ಟೋನ್ ಅನ್ನು ಹೆಚ್ಚಿಸುವ ಅನೇಕ ಅಂಶಗಳನ್ನು ಒಳಗೊಂಡಿದೆ. ಸೌತೆಕಾಯಿಯ ತುಂಡನ್ನು ಕತ್ತರಿಸಿ ಮೊಣಕೈಗೆ ಮಸಾಜ್ ಮಾಡುವುದರಿಂದಲೂ ಮೊಣಕೈ ಕಪ್ಪು ಕಲೆ ನಿವಾರಣೆಯಾಗುತ್ತದೆ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು Zee ಮೀಡಿಯಾ ಖಚಿತಪಡಿಸುವುದಿಲ್ಲ.

VIEW ALL

Read Next Story