ರಿಂಗ್ವರ್ಮ್ ಸಮಸ್ಯೆಗೆ ಇಲ್ಲಿವೆ 5 ಸುಲಭ ಪರಿಹಾರ
ರಿಂಗ್ವರ್ಮ್/ ತುರಿಗೆ ಸಮಸ್ಯೆಗೆ ಹಲವು ಕಾರಣಗಳಿರಬಹುದು. ಆದರೆ, ಆರಂಭದಲ್ಲಿಯೇ ಇದಕ್ಕೆ ಚಿಕಿತ್ಸೆ ನೀಡದಿದ್ದರೆ ಈ ಸಮಸ್ಯೆ ಉಲ್ಬಣಗೊಳ್ಳುವ ಸಾಧ್ಯತೆ ಇದೆ.
ರಿಂಗ್ವರ್ಮ್ ಸಮಸ್ಯೆಗೆ ಮಾರುಕಟ್ಟೆಯಲ್ಲಿ ಹಲವು ಔಷಧಿಗಳು ಲಭ್ಯವಿವೆ. ಆದರೆ, ನೀವು ಮನೆಯಲ್ಲಿ ಲಭ್ಯವಿರುವ ಕೆಲವು ಪದಾರ್ಥಗಳ ಸಹಾಯದಿಂದಲೂ ಈ ಸಮಸ್ಯೆಗೆ ಸುಲಭ ಪರಿಹಾರ ಪಡೆಯಬಹುದು. ಅಂತಹ 5 ಪರಿಹಾರಗಳೆಂದರೆ...
ಕರಿಬೇವಿನ ಸೊಪ್ಪನ್ನು ನೀರಿನಲ್ಲಿ ಅರೆದು ಇದಕ್ಕೆ ಜೇನುತುಪ್ಪವನ್ನು ಬೆರೆಸಿ ಪೀಡಿತ ಪ್ರದೇಶದಲ್ಲಿ ಅನ್ವಯಿಸಿ. ನಿಯಮಿತವಾಗಿ ಈ ರೀತಿ ಮಾಡುವುದರಿಂದ ಶೀಘ್ರದಲ್ಲೇ ರಿಂಗ್ವರ್ಮ್ ಸಮಸ್ಯೆಯಿಂದ ಪರಿಹಾರ ಪಡೆಯಬಹುದು.
ರಿಂಗ್ವರ್ಮ್ಗೆ ಪುದೀನ ರಸ ಅತ್ಯುತ್ತಮ ಮನೆಮದ್ದು. ಇದಕ್ಕಾಗಿ ಆಗಾಗ್ಗೆ ರಿಂಗ್ವರ್ಮ್ ಪೀಡಿತ ಜಾಗದಲ್ಲಿ ಪುದೀನ ರಸವನ್ನು ಹಚ್ಚುತ್ತಿರಿ.
ಬೇವು ಅತ್ಯುತ್ತಮ ಆಂಟಿಬ್ಯಾಕ್ಟಿಕ್ ಎಂದು ನಿಮಗೆ ತಿಳಿದೇ ಇದೆ. ರಿಂಗ್ವರ್ಮ್ನಿಂದ ಪರಿಹಾರಕ್ಕಾಗಿ ಬೇವಿನ ಎಲೆಗಳನ್ನು ಬಿಸಿ ನೀರಿನಲ್ಲಿ ಹಾಕಿ ಆ ನೀರಿನಿಂದ ಸ್ನಾನ ಮಾಡಿ.
ಅಲೋವೆರಾವನ್ನು ಮಜ್ಜಿಗೆಯಲ್ಲಿ ಬೆರೆಸಿ ರಿಂಗ್ವರ್ಮ್ ಪೀಡಿತ ಪ್ರದೇಶಗಳಲ್ಲಿ ಹಚ್ಚುವುದರಿಂದ ಶೀಘ್ರದಲ್ಲೇ ಪರಿಹಾರ ಸಿಗುತ್ತದೆ.
ಬೆಳ್ಳುಳ್ಳಿ ರಸವನ್ನು ರಿಂಗ್ವರ್ಮ್ ಆಗಿರುವ ಜಾಗದಲ್ಲಿ ಲೇಪಿಸುವುದರಿಂದ ಈ ಸಮಸ್ಯೆಯಿದ್ನ ಪರಿಹಾರ ಪಡೆಯಬಹುದು. ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.