ಕಪ್ಪು ತುಟಿಯನ್ನು ಕೆಂಪಾಗಾಗಿಸಿ ಗುಲಾಬಿ ದಳದಂತೆ ಸಾಫ್ಟ್‌ ಮಾಡಲು ಇಲ್ಲಿದೆ ಸರಳ ಮನೆಮದ್ದು

Bhavishya Shetty
Aug 05,2024

ಲಿಪ್ ಬಾಮ್‌

ಕೆಲವೊಬ್ಬರ ತುಟಿಗಳು ಅನುವಂಶಿಕವಾಗಿ ಕಪ್ಪಾಗಿರುತ್ತದೆ. ಅಂತಹ ಸಂದರ್ಭದಲ್ಲಿ ವಿವಿಧ ರೀತಿಯ ಲಿಪ್ ಬಾಮ್‌, ಲಿಪ್‌ ಸ್ಟಿಕ್‌ʼಗಳನ್ನು ಬಳಕೆ ಮಾಡುವುದು ಸಾಮಾನ್ಯ.

ಮನೆಮದ್ದು

ಆದರೆ ಅವುಗಳು ತುಟಿಗಳಿಗೆ ಪ್ರಯೋಜನಕ್ಕಿಂತ ಹೆಚ್ಚು ಹಾನಿಯನ್ನುಂಟುಮಾಡುತ್ತವೆ. ಹೀಗಿರುವಾಗ ಕೆಲವೊಂದು ಮನೆಮದ್ದುಗಳನ್ನು ಬಳಸಿ, ಗುಲಾಬಿ ದಳಗಳಂತ ಸಾಫ್ಟ್‌ ತುಟಿಗಳನ್ನು ಪಡೆಯಬಹುದು.


ಇನ್ನು ತುಟಿಗಳು ಬಿರುಕು ಬಿಡಲು ಹವಾಮಾನ ವೈಪರೀತ್ಯವೂ ಕಾರಣ. ವಿಶೇಷವಾಗಿ ಚಳಿಗಾಲದಲ್ಲಿ ಚರ್ಮದ ಶುಷ್ಕತೆ ಹೆಚ್ಚಾಗತೊಡಗುತ್ತದೆ. ಆದ್ದರಿಂದ ತುಟಿಗಳು ಕೂಡ ಒಣಗುತ್ತವೆ. ಜೊತೆಗೆ ಹೆಚ್ಚು ಕಪ್ಪಾಗಿ ಮಾರ್ಪಾಡಾಗುತ್ತವೆ.


ಇದಕ್ಕೆ ಜೇನುತುಪ್ಪವನ್ನು ಹಚ್ಚಬೇಕು. ಇದು ತುಟಿಗಳನ್ನು ತೇವಾಂಶದಿಂದ ಇರಿಸುತ್ತದೆ. ಜೊತೆ ಮೃದುವಾಗಿ ಸುಂದರವಾಗಿರುತ್ತದೆ.

ವಾಲ್ನಟ್‌ ಪುಡಿ

ಮಾರುಕಟ್ಟೆಯಿಂದ ವಾಲ್ನಟ್‌ ಪುಡಿಯನ್ನು ಖರೀದಿಸಬಹುದು ಅಥವಾ ಮನೆಯಲ್ಲೇ ಮಿಕ್ಸಿಯಲ್ಲಿ ರುಬ್ಬಿ ಪುಡಿಯನ್ನು ತಯಾರಿಸಬಹುದು. ಇದನ್ನು ಸಣ್ಣ ಪಾತ್ರೆಯಲ್ಲಿ ಹಾಕಿ, ಅದಕ್ಕೆ 1-2 ಚಮಚ ಜೇನುತುಪ್ಪ ಸೇರಿಸಿ.

ಮಸಾಜ್‌

ಈಗ ಮಿಶ್ರಣ ಮಾಡಿ ತುಟಿಗಳಿಗೆ ಹಚ್ಚಿ. ನಂತರ ಬೆರಳಿನ ಸಹಾಯದಿಂದ ಚೆನ್ನಾಗಿ ಮಸಾಜ್‌ ಮಾಡಿ. ಹೆಚ್ಚು ಒತ್ತಡದಿಂದ ತುಟಿಗಳನ್ನು ಉಜ್ಜಬೇಡಿ.

ಡೆಡ್‌ ಸ್ಕಿನ್‌

ಹೀಗೆ ಮಾಡುವಾಗ ತುಟಿಗಳಲ್ಲಿರುವ ಡೆಡ್‌ ಸ್ಕಿನ್‌ ಹೋಗಿ ಮೃದುವಾಗುತ್ತವೆ. ನಂತರ ಶುದ್ಧ ನೀರಿನ ಸಹಾಯದಿಂದ ತುಟಿಗಳನ್ನು ಸ್ವಚ್ಛಗೊಳಿಸಿ. ಈ ಪೇಸ್ಟ್ ಅನ್ನು ವಾರಕ್ಕೆ ಎರಡು ಬಾರಿ ಬಳಸಬಹುದು.

ಸೂಚನೆ

ಈ ಸುದ್ದಿಯನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ತೆಗೆದುಕೊಂಡಿದ್ದೇವೆ. ಆರೋಗ್ಯಕ್ಕೆ ಸಂಬಂಧಿಸಿದ ಯಾವುದನ್ನಾದರೂ ನೀವು ಎಲ್ಲಿಯಾದರೂ ಓದಿದ್ದರೆ, ಅದನ್ನು ಅಳವಡಿಸಿಕೊಳ್ಳುವ ಮೊದಲು ಖಂಡಿತವಾಗಿಯೂ ವೈದ್ಯರನ್ನು ಸಂಪರ್ಕಿಸಿ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story