ಮೊಡವೆ ಕಲೆಗಳನ್ನು ಕೇವಲ 10 ದಿನಗಳಲ್ಲಿ ದೂರ ಮಾಡುವ ಮನೆಮದ್ದುಗಳು

Bhavishya Shetty
Feb 06,2024

ಮೊಡವೆ ಕಲೆಗೆ ಪರಿಹಾರ

ಮುಖದಲ್ಲಿರುವ ಮೊಡವೆ ಕಲೆಗಳನ್ನು ಕೇವಲ 10 ದಿನಗಳಲ್ಲಿ ದೂರ ಮಾಡುವ ಮನೆಮದ್ದುಗಳನ್ನು ನಾವಿಂದು ನಿಮಗೆ ತಿಳಿಸಿಕೊಡಲಿದ್ದೇವೆ.

ಮನೆಮದ್ದುಗಳು

ಗಿಡಮೂಲಿಕೆ ವಿಧಾನಗಳು ಮತ್ತು ಮನೆಮದ್ದುಗಳ ಮೂಲಕ ಚರ್ಮವನ್ನು ಸ್ವಚ್ಛಗೊಳಿಸಬೇಕು. ಇದರಿಂದ ಚರ್ಮದ ನೈಸರ್ಗಿಕ ವಿನ್ಯಾಸ ಉಳಿಯುತ್ತದೆ ಹಾಗೂ ಕಲೆಗಳು ಸಂಪೂರ್ಣವಾಗಿ ಮಾಯವಾಗುತ್ತವೆ.

ಆಲೂಗಡ್ಡೆ

ಮುಖದ ಕಲೆಗಳನ್ನು ತ್ವರಿತವಾಗಿ ತೆಗೆದುಹಾಕುವ ತರಕಾರಿಗಳಲ್ಲಿ ಮೊದಲ ಹೆಸರು ಆಲೂಗಡ್ಡೆ. ಪ್ರತಿದಿನ ಆಲೂಗೆಡ್ಡೆ ರಸವನ್ನು ಮುಖಕ್ಕೆ ಹಚ್ಚಿದರೆ ಅಥವಾ ಮುಖದ ಮೇಲೆ ಆಲೂಗಡ್ಡೆಯನ್ನು ಉಜ್ಜಿದರೆ, ಮುಖದ ಮೇಲಿನ ಡಾರ್ಕ್ ಸ್ಪಾಟ್ ಅಥವಾ ಮೊಡವೆ ಕಲೆಗಳು ಕೇವಲ 10 ದಿನಗಳಲ್ಲಿ ಮಾಯವಾಗುತ್ತವೆ.

ಟೊಮೆಟೊ

ಟೊಮೆಟೊವನ್ನು ತೊಳೆದು ಚೆನ್ನಾಗಿ ರುಬ್ಬಿಕೊಳ್ಳಿ. ನಂತರ ಅದರ ರಸವನ್ನು ತೆಗೆಯಿರಿ. ಈ ರಸವನ್ನು ಮುಖಕ್ಕೆ ಹಚ್ಚಿದರೆ ಮೊಡವೆ ಕಲೆಗಳು ಅಥವಾ ಕಪ್ಪು ವರ್ತುಲವು ತಿಳಿಯಾಗುತ್ತವೆ.

ನಿಂಬೆ

ನಿಂಬೆಯಲ್ಲಿ ಕಂಡುಬರುವ ಸಿಟ್ರಿಕ್ ಆಮ್ಲ ಮತ್ತು ವಿಟಮಿನ್ ಸಿ ಚರ್ಮವನ್ನು ನಿಷ್ಕಳಂಕವಾಗಿಸಲು ಸಹಾಯ ಮಾಡುತ್ತದೆ. ನಿಯಮಿತವಾಗಿ ಹಚ್ಚುತ್ತಾ ಬಂದರೆ, ಮೊಡವೆ ಕಲೆಗಳು ಮಾಯವಾಗುತ್ತವೆ.

ಸೌತೆಕಾಯಿ

ಸೌತೆಕಾಯಿಯಿಂದ ಫೇಸ್ ಪ್ಯಾಕ್ ಮಾಡಲು, ಮಿಕ್ಸಿಯಲ್ಲಿ ಪೇಸ್ಟ್ ತಯಾರಿಸಬಹುದು. ಈ ಪೇಸ್ಟ್’ಗೆ 1 ಟೀಚಮಚ ಶ್ರೀಗಂಧದ ಪುಡಿ, 1 ಟೀಚಮಚ ಮುಲ್ತಾನಿ ಮಿಟ್ಟಿ, 1 ಟೀಚಮಚ ರೋಸ್ ವಾಟರ್, 2 ರಿಂದ 3 ಹನಿ ತೆಂಗಿನ ಎಣ್ಣೆ ಹಾಕಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ 20 ನಿಮಿಷಗಳ ನಂತರ ಮುಖ ತೊಳೆಯಿರಿ.

ಸೂಚನೆ:

ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee News Kannada ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.

VIEW ALL

Read Next Story