ಕೆಲವು ಸರಳ ಉಪಾಯಗಳನ್ನು ಅನುಸರಿಸುವ ಮೂಲಕ ಮನೆಯಲ್ಲಿನ ಜಿರಲೆಗಳ ಕಾಟದಿಂದ ಮುಕ್ತಿ ಪಡೆಯಬಹುದು.
ಬೇಕಿಂಗ್ ಪೌಡರ್ ಮತ್ತು ಸಕ್ಕರೆಯನ್ನು ನೀರಿನಲ್ಲಿ ಬೆರೆಸಿ ಮಿಶ್ರಣ ಮಾಡಿ ಸ್ಪ್ರೇ ಬಾಟಲಿಗೆ ಹಾಕಿಕೊಳ್ಳಿ. ನಂತರ ಜಿರಳೆ ಓಡಾಡುವ ಜಾಗಕ್ಕೆ ಅದನ್ನು ಸಿಂಪಡಿಸಿ.
ಲವಂಗದ ಪರಿಮಳವನ್ನು ಜಿರಳೆ ಸಹಿಸುವುದಿಲ್ಲ. ಹಾಗಾಗಿ ಲವಂಗವನ್ನು ಜಿರಳೆಗಳು ಕಾಣಿಸಿಕೊಳ್ಳುವ ಜಾಗದಲ್ಲಿ ಇಟ್ಟರೆ ಮತ್ತೆ ಜಿರಳೆ ಅಲ್ಲಿಗೆ ಬರುವುದಿಲ್ಲ.
ಸೀಮೆ ಎಣ್ಣೆಯ ವಾಸನೆಗೆ ಜಿರಳೆ ಅಲ್ಲಿ ನಿಲ್ಲುವುದೇ ಇಲ್ಲ. ಹಾಗಾಗಿ ಅಲ್ಲಲ್ಲಿ ಸೀಮೆ ಎಣ್ಣೆ ಸ್ಪ್ರೇ ಮಾಡಿದರೆ ಜಿರಳೆಗಳ ಕಾಟದಿಂದ ಮುಕ್ತಿ ಸಿಗುತ್ತದೆ.
ಬಿರಿಯಾನಿ ಎಲೆಯ ವಾಸನೆ ಕೂಡಾ ಜಿರಳೆ ಸಹಿಸುವುದಿಲ್ಲ. ಹಾಗಾಗಿ ಇದನ್ನು ಮುರಿದು ಅಲ್ಲಲ್ಲಿ ಹಾಕಿ ಬಿಡಿ. ಜಿರಳೆ ಅದರ ವಾಸನೆಗೆ ಓಡಿ ಹೋಗುತ್ತದೆ.
ಮೊಟ್ಟೆಯ ಸಿಪ್ಪೆಯನ್ನು ಕಂಡರೆ ಜಿರಳೆ ಹೆದರಿಕೊಳ್ಳುತ್ತದೆ.ಆಗಾಗು ಮೊಟ್ಟೆಯ ಸಿಪ್ಪೆಯನ್ನು ಇಟ್ಟರೆ ಕೂಡಾ ಜಿರಳೆ ಬರುವುದಿಲ್ಲ.
ಬೇವಿನ ಎಣ್ಣೆಯ ಸ್ಪ್ರೇ ಮಾಡಿದರೆ ಅದರ ಘಾಟು ಮತ್ತು ಕಹಿಗೆ ಜಿರಳೆ ಮನೆಯಿಂದ ಹೊರಕ್ಕೆ ಓಡುತ್ತದೆ.
ಈ ಸರಳ ಉಪಾಯಗಳನ್ನು ಬಳಸುವ ಮೂಲಕ ಮನೆಯಿಂದ ಜಿರಳೆಗಳನ್ನು ಹೊರ ಹಾಕಬಹುದು.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.