ನೈಸರ್ಗಿಕವಾಗಿ ತಲೆಹೊಟ್ಟನ್ನು ನಿವಾರಿಸಲು ಅತ್ಯುತ್ತಮ ಮನೆಮದ್ದುಗಳು

Yashaswini V
May 16,2024

ಡ್ಯಾಂಡ್ರಫ್

ಡ್ಯಾಂಡ್ರಫ್ ಸಮಸ್ಯೆಯಿಂದ ಪರಿಹಾರ ಪಡೆಯಲು ನಿಮ್ಮ ಮನೆಯಲ್ಲಿರುವ ಕೆಲವು ಪದಾರ್ಥಗಳು ಪ್ರಯೋಜನಕಾರಿ.

ಗೋರಂಟಿ ಪುಡಿ

ಗೋರಂಟಿ ಪುಡಿಯಲ್ಲಿ ನಿಂಬೆ ರಸ, ಮೊಟ್ಟೆಯನ್ನು ಬೆರೆಸಿ ಹಚ್ಚಿ, 30 ನಿಮಿಷಯಗಳ ಬಳಿಕ ಹೇರ್ ವಾಶ್ ಮಾಡುವುಯರಿಂದ ಡ್ಯಾಂಡ್ರಫ್ ನಿವಾರಣೆಯಾಗುತ್ತದೆ.

ಬೀಟ್ರೂಟ್

ಬೀಟ್ರೂಟ್ ಅನ್ನು ಸಣ್ಣಗೆ ತುರಿದು ಕೂದಲಿಗೆ ಅನ್ವಯಿಸಿ ಅದು ಒಣಗಿದ ಬಳಿಕ ಉಗುರು ಬೆಚ್ಚಗಿನ ನೀರಿನಿಂದ ಕೂದಲನ್ನು ತೊಳೆಯಿರಿ. ವಾರಕ್ಕೊಮ್ಮೆ ಈ ಕೆಲಸ ಮಾಡುವುದರಿಂದ ತಲೆಹೊಟ್ಟನ್ನು ನಿವಾರಿಸಬಹುದು.

ಕಡಲೆ ಹಿಟ್ಟು

ಕಡಲೆ ಹಿಟ್ಟಿನಲ್ಲಿ ಜೇನುತುಪ್ಪವನ್ನು ಬೆರೆಸಿ ಕೂದಲಿಗೆ ಅನ್ವಯಿಸಿ ಅರ್ಧಗಂಟೆ ಬಿಟ್ಟು ಹೇರ್ ವಾಶ್ ಮಾಡುವುದರಿಂದ ಡ್ಯಾಂಡ್ರಫ್ ನಿವಾರಿಸಬಹುದು.

ನೆಲ್ಲಿಕಾಯಿ ಪುಡಿ

ನೆಲ್ಲಿಕಾಯಿ ಪುಡಿಯಲ್ಲಿ ನಿಂಬೆ ರಸವನ್ನು ಬೆರೆಸಿ ಕೂದಲಿನ ಬುಡದಿಂದ ಹಚ್ಚಿ 15 ನಿಮಿಷ ಬಿಟ್ಟು ತಣ್ಣೀರಿನಿಂದ ಹೇರ್ ವಾಶ್ ಮಾಡುವುದರಿಂದ ತಲೆಹೊಟ್ಟಿನ ಸಮಸ್ಯೆ ನಿವಾರಣೆಯಾಗುತ್ತದೆ.

ಮೊಸರು

ಕೂದಲಿಗೆ ಹುಳಿ ಮೊಸರನ್ನು ಅನ್ವಯಿಸಿ ಅದು ಪೂರ್ತಿಯಾಗಿ ಒಣಗಿದ ಬಳಿಕ ಹೇರ್ ವಾಶ್ ಮಾಡುವುದರಿಂದ ತಲೆಹೊಟ್ಟಿನ ಸಮಸ್ಯೆಯಿಂದ ಪರಿಹಾರ ಪಡೆಯಬಹುದು

ಸೂಚನೆ

ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story