ಬಾಳೆಹಣ್ಣನ್ನು ಈ ರೀತಿಯಲ್ಲಿ ಬಳಸಿದರೆ ಉದ್ದ ಮತ್ತು ಕಡುಕಪ್ಪಾಗಿ ಸೊಂಟದಾಟಿ ಬೆಳೆಯುತ್ತೆ ಕೂದಲು

ಹಾನಿಗೆ ಕಾರಣಗಳು

ದೇಹದಲ್ಲಿ ಅಗತ್ಯವಾದ ಪೋಷಕಾಂಶಗಳ ಕೊರತೆ, ಒತ್ತಡ, ಹಾರ್ಮೋನುಗಳ ಅಸಮತೋಲನ, ಕೆಲವು ಆರೋಗ್ಯ ಪರಿಸ್ಥಿತಿಗಳು ಮತ್ತು ಸರಿಯಾದ ಆರೈಕೆ ಇಲ್ಲದಿರುವುದು ಕೂದಲಿನ ಹಾನಿಗೆ ಪ್ರಮುಖ ಕಾರಣಗಳು.

ಕೂದಲಿಗೆ ಆರೈಕೆ

ಇನ್ನು ಕೂದಲಿನ ಸಮಸ್ಯೆಗಳಿಗೆ ದುಬಾರಿ ಉತ್ಪನ್ನಗಳ ಬದಲು ಮನೆಮದ್ದುಗಳನ್ನು ಬಳಕೆ ಮಾಡುವುದು ಸೂಕ್ತ. ಇದರಿಂದಾಗಿ ಕೂದಲಿಗೆ ಉತ್ತಮ ಆರೈಕೆ ಸಿಗುತ್ತದೆ. ಅದರಲ್ಲೂ ಕೆಲ ಹಣ್ಣುಗಳು ಕೂದಲಿಗೆ ಬಹಳಷ್ಟು ಪ್ರಯೋಜನವನ್ನು ನೀಡುತ್ತದೆ.

ಮನೆಮದ್ದು

ಕೆಲ ವಸ್ತುಗಳ ಸಹಾಯದಿಂದ ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದಾದ ಹೇರ್ ಮಾಸ್ಕ್ ಕೂದಲನ್ನು ಉದ್ದ ಮತ್ತು ದಪ್ಪವಾಗಿಸಲು ಸಹಾಯ ಮಾಡುತ್ತದೆ.

ಹೇರ್‌ ಮಾಸ್ಕ್‌

ಕೂದಲು ಉದ್ದ ಮತ್ತು ದಪ್ಪವಾಗಿ ಬೆಳೆಯಬೇಕೆಂದರೆ ಬಾಳೆಹಣ್ಣಿನ ಹೇರ್‌ ಮಾಸ್ಕ್‌ ಬಹಳಷ್ಟು ಪ್ರಯೋಜನಕಾರಿ. ಈ ಹೇರ್‌ ಮಾಸ್ಕ್‌ ತಯಾರಿಸಲು ಹೆಚ್ಚಿನ ಶ್ರಮದ ಅಗತ್ಯವಿಲ್ಲ. ತೆಂಗಿನೆಣ್ಣೆ ಮತ್ತು ಬಾಳೆಹಣ್ಣನ್ನು ಮಿಕ್ಸ್‌ ಮಾಡಿ ಕೂದಲಿಗೆ ಹಚ್ಚಿದರೆ ಸಾಕು. 20 ನಿಮಿಷಗಳ ನಂತರ ಸ್ವಚ್ಛಗೊಳಿಸಿದರೆ ಕೂದಲು ದಷ್ಟಪುಷ್ಟವಾಗಿ ಬೆಳೆಯುತ್ತದೆ.

ಕೂದಲಿನ ಬೆಳವಣಿಗೆ

ತೆಂಗಿನಕಾಯಿಯಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಇವು ಕೂದಲು ಮತ್ತು ನೆತ್ತಿಯನ್ನು ಪೋಷಿಸುವುದಲ್ಲದೆ, ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುತ್ತವೆ.

ಕೂದಲಿಗೆ ಬಲ

ಬಾಳೆಹಣ್ಣು ಪೊಟ್ಯಾಸಿಯಮ್ನಲ್ಲಿ ಸಮೃದ್ಧವಾಗಿದ್ದು, ಇದು ಕೂದಲನ್ನು ಬಲಪಡಿಸುತ್ತದೆ. ಆ್ಯಂಟಿ ಆಕ್ಸಿಡೆಂಟ್‌ʼಗಳು ಕೂದಲಿಗೆ ರಕ್ಷಣೆಯಾಗಿ ಕಾರ್ಯನಿರ್ವಹಿಸುತ್ತದೆ. ಅಂತೆಯೇ ಕೂದಲನ್ನು ಮೃದು ಮತ್ತು ಹೊಳೆಯುವಂತೆ ಮಾಡುತ್ತದೆ

ಮಾಡುವ ವಿಧಾನ

ಮಾಗಿದ ಬಾಳೆಹಣ್ಣನ್ನು ತೆಂಗಿನ ಎಣ್ಣೆಯೊಂದಿಗೆ ಮಿಶ್ರಣ ಮಾಡಿ. ಈಗ ಅದಕ್ಕೆ ಬೇಕಿದ್ದರೆ ತೆಂಗಿನ ಹಾಲು ಸೇರಿಸಿ. ಈ ಮಿಶ್ರಣವನ್ನು ಕೂದಲಿಗೆ ಹಚ್ಚಿ, ಸುಮಾರು ಅರ್ಧ ಘಂಟೆಯ ನಂತರ ತೊಳೆಯಿರಿ. ಈ ಪರಿಹಾರವನ್ನು ವಾರಕ್ಕೆ ಎರಡು ಬಾರಿ ಅನುಸರಿಸಿದರೆ ಉತ್ತಮ.

ಸೂಚನೆ

ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ.ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story