ಬೀಟ್‌ರೂಟ್ ಉಪ್ಪಿನಕಾಯಿ ಮಾಡುವ ವಿಧಾನ

ಬೀಟ್‌ರೂಟ್ ಉಪ್ಪಿನಕಾಯಿ ಪದಾರ್ಥಗಳು

2 ಬೀಟ್‌ರೂಟ್, 2 ಟೀಚಮಚ ಸಾಸಿವೆ ಎಣ್ಣೆ, 1 ಟೀಚಮಚ ಸಾಸಿವೆ, 1/2- 1/2 ಟೀಚಮಚ ಮೆಂತ್ಯ ಬೀಜಗಳು, ಫೆನ್ನೆಲ್, ನಿಗೆಲ್ಲ, ಅರಿಶಿನ, ಕೆಂಪು ಮೆಣಸಿನಕಾಯಿ, ಉಪ್ಪು, ಸಕ್ಕರೆ, 1/4 ಕಪ್ ವಿನೆಗರ್.

ತಯಾರಿಸುವ ವಿಧಾನ

ಬೀಟ್‌ರೂಟ್ ಅನ್ನು ತುರಿದು ಅಥವ ಕಟ್‌ ಮಾಡಿ ಪಕ್ಕಕ್ಕೆ ಇಡಿ.

ಒಗ್ಗರಣೆ

ಪ್ಯಾನ್‌ನಲ್ಲಿ ಸಾಸಿವೆ ಎಣ್ಣೆ ಹಾಕಿ ಬಸಿಯಾಗಲು ಬಿಡಿ. ಬಿಸಿಯಾದ ನಂತರ ಸಾಸಿವೆ, ಮೆಂತ್ಯ ಕಾಳು, ಫೆನ್ನೆಲ್ ಮತ್ತು ನಿಗೆಲ್ಲ ಸೇರಿಸಿ ಸಿಡಿಯಲು ಬಿಡಿ.

ಮಸಾಲೆ ಸೇರಿಸಿ

ತಯಾರಾದ ಒಗ್ಗರಣೆಗೆ ಅರಿಶಿನ ಪುಡಿ ಮತ್ತು ಕೆಂಪು ಮೆಣಸಿನ ಪುಡಿ ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿ ಮತ್ತು ತುರಿದ ಅಥವಾ ಕತ್ತರಿಸಿದ ಬೀಟ್ಯೂಟ್ ಸೇರಿಸಿ.

ಬೀಟ್‌ರೂಟ್ ಬೇಯಿಸಿ

ಬೀಟ್‌ರೂಟ್ ಅನ್ನು 4-5 ನಿಮಿಷಗಳ ಕಾಲ ಮಧ್ಯಮ ಉರಿಯಲ್ಲಿ ಬೇಯಿಸಿ. ಇದಕ್ಕೆ ಉಪ್ಪು ಮತ್ತು ಸಕ್ಕರೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.

ಗಾಜಿನ ಜಾರ್‌

ಗಾಜಿನ ಜಾಡಿಯನ್ನು ಚೆನ್ನಾಗಿ ತೊಳೆದು ಅದರಲ್ಲಿ ತೇವಾಂಶ ಇಲ್ಲದಂತೆ ಕ್ಲೀನ್‌ ಮಾಡಿ.

ಮೂರು ದಿನ ಮುಚ್ಚಿಡಿ

ತಯಾರಾದ ಮಿಶ್ರಣವನ್ನು ಜಾಡಿಯಲ್ಲಿ ಹಾಕಿ. ಎರಡು, ಮೂರು ದಿನಗಳ ನಂತರ ಬೇಟ್‌ರೂಟ್‌ ಉಪ್ಪಿನಕಾಯಿ ಸವಿಯಲು ರೆಡಿ.

VIEW ALL

Read Next Story