ತಪ್ಪಾದ UPI ಗೆ ಹಣ ಕಳುಹಿಸಿದ್ದೀರಾ..? ಹಾಗಾದರೆ ಹೀಗೆ ಮಾಡಿ ಹಣವನ್ನು ಹಿಂಪಡೆಯಿರಿ

Zee Kannada News Desk
Aug 05,2024


ತಪ್ಪಾದ UPI ನಂಬರ್‌ಗೆ ನೀವು ಹಣ ವರ್ಗಾಹಿಸಿದ್ದೀರಾ..?ಹಣ ವಾಪಸ್‌ ಬರಲಲ ಅನ್ನುವ ಭಯವಿದೆಯಾ..? ಇನ್ನು ಮುಂದೆ ಹಣ ಕಳೆದುಕೊಂಡ ಚಿಂತೆ ಬಿಟ್ಟು ಹೀಗೆ ಮಾಡಿ...ನಿಮ್ಮ ಹಣ ವಾಪಸ್‌ ಆಗುತ್ತದೆ.

UPI

ನೀವು ಮೊಬೈಲ್ UPI ಮೂಲಕ ತಪ್ಪು ಖಾತೆಗೆ ಹಣವನ್ನು ವರ್ಗಾಯಿಸಿದರೆ ನೀವು 48 ರಿಂದ 72 ಗಂಟೆಗಳ ಒಳಗೆ ರವಾನೆಯನ್ನು ಮರಳಿ ಪಡೆಯಬಹುದು.

ಗ್ರಾಹಕ ಸೇವಾ ಕೇಂದ್ರ

ಅಮಾನ್ಯವಾದ UPI ಸಂಖ್ಯೆಗೆ ಪಾವತಿ ಮಾಡಿದ ತಕ್ಷಣ ನೀವು ಬ್ಯಾಂಕಿನ ಗ್ರಾಹಕ ಸೇವಾ ಕೇಂದ್ರಕ್ಕೆ ಕರೆ ಮಾಡಬೇಕು.

ಟೋಲ್ ಫ್ರೀ ಸಂಖ್ಯೆ

ನೀವು ಬಯಸಿದರೆ, ನೀವು UPI ಸೇವಾ ಪೂರೈಕೆದಾರರನ್ನು ಸಹ ಸಂಪರ್ಕಿಸಬಹುದು. ಇದಕ್ಕಾಗಿ ಟೋಲ್ ಫ್ರೀ ಸಂಖ್ಯೆ 19001201740 ಡಯಲ್‌ ಮಾಡಿ.

RBI ನಿಯಮ

RBI ನಿಯಮಗಳ ಪ್ರಕಾರ, ತಪ್ಪಾದ ಪಾವತಿಯ ಬಗ್ಗೆ ನಿಮ್ಮ ಪಾವತಿ ಸೇವಾ ಪೂರೈಕೆದಾರರಿಗೆ ಮೊದಲು ತಿಳಿಸುವ ಮೂಲಕ ಕಳೆದುಕೊಂಡ ಹಣವನ್ನು ಮರಲಿ ಪಡೆಯಬಹುದು.

NPCI ಪೋರ್ಟಲ್‌

ನೀವು ಗ್ರಾಹಕ ಸೇವೆಯಿಂದ ಸಹಾಯ ಪಡೆಯದಿದ್ದರೆ, ನೀವು NPCI ಪೋರ್ಟಲ್‌ನಲ್ಲಿ ದೂರು ನೀಡಬಹುದು. ಮೊದಲು ಎನ್‌ಪಿಸಿಐನ ಅಧಿಕೃತ ವೆಬ್‌ಸೈಟ್‌ನಲ್ಲಿ ದೂರು ನೀಡಬೇಕು.

ವೆಬ್‌ಸೈಟ್‌

ವೆಬ್‌ಸೈಟ್‌ನಲ್ಲಿ ಸಂಪರ್ಕದಲ್ಲಿರಲು ಸಬ್ಮಿಟ್‌ ಆಪ್ಷನ್‌ ಕ್ಲಿಕ್ ಮಾಡಿ. ಇದರ ನಂತರ ಎಲ್ಲಾ ವಿನಂತಿಸಿದ ಮಾಹಿತಿಯನ್ನು ನಮೂದಿಸಿ.

ಇಮೇಲ್

ಇದರಲ್ಲಿ ಹೆಸರು ಮತ್ತು ಇಮೇಲ್ ಐಡಿಯಂತಹ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಬೇಕು. ನಂತರ ಅದನ್ನು ಸೈಟ್ನಲ್ಲಿ ಸಲ್ಲಿಸಿ.

ಹಣವನ್ನು ಹಿಂಪಡೆಯಿರಿ

ತಪ್ಪಾಗಿ ಹಣವನ್ನು ವರ್ಗಾಯಿಸಿದ ವ್ಯಕ್ತಿಯನ್ನು ಸಂಪರ್ಕಿಸುವ ಮೂಲಕ ಅಥವಾ ನಿಮ್ಮ ಬ್ಯಾಂಕ್ ಅನ್ನು ಸಂಪರ್ಕಿಸುವ ಮೂಲಕ ನೀವು ನಿಮ್ಮ ಹಣವನ್ನು ಹಿಂಪಡೆಯಬಹುದು.

VIEW ALL

Read Next Story