ಲಾಂಗ್ ಹೇರ್

ಉದ್ದವಾದ, ದಟ್ಟವಾದ ಕೂದಲಿಗಾಗಿ ನಿಮ್ಮ ಡಯಟ್ನಲ್ಲಿರಲಿ ಈ 10 ಆಹಾರಗಳು

Yashaswini V
Sep 20,2023

ಸಾಲ್ಮನ್

ಒಮೆಗಾ-3 ಕೊಬ್ಬಿನಾಮ್ಲಗಳನ್ನು ಹೊಂದಿರುವ ಸಾಲ್ಮನ್ ಫಿಶ್ ಸೇವನೆಯಿಂದ ಕೂದಲು ಆರೋಗ್ಯಕರವಾಗಿರುತ್ತದೆ.

ಸಿಹಿ ಗೆಣಸು

ಸಿಹಿ ಗೆಣಸಿನಲ್ಲಿರುವ ಬೀಟಾ-ಕ್ಯಾರೋಟಿನ್‌ ಉತ್ತಮ ಕೂದಲು ಬೆಳವಣಿಗೆಗೆ ಪ್ರಮುಖವಾಗಿದೆ.

ಬಾದಾಮಿ

ಬಾದಾಮಿಯಲ್ಲಿರುವ ಒಮೆಗಾ-3 ಕೊಬ್ಬಿನಾಮ್ಲಗಳು, ಸತು, ವಿಟಮಿನ್ ಇ, ಬಿ1 ಮತ್ತು ಬಿ6 ಮತ್ತು ಸೆಲೆನಿಯಮ್ ಕೂದಲಿನ ಬೆಳವಣಿಗೆಗೆ ಅತ್ಯುತ್ತಮ ಪೋಷಕಾಂಶವಾಗಿದೆ.

ಮೊಟ್ಟೆಗಳು

ಮೊಟ್ಟೆಗಳಲ್ಲಿರುವ ಪ್ರೋಟೀನ್, ಕೋಲೀನ್, ಕಬ್ಬಿಣ ಮತ್ತು ವಿಟಮಿನ್ ಎ, ಡಿ ಮತ್ತು ಬಿ 12 ನಂತಹ ಆರೋಗ್ಯಕರ ಪೋಷಕಾಂಶಗಳು ಕೂದಲ ಬೆಳವಣಿಗೆಯನ್ನು ಉತ್ತೇಜಿಸುತ್ತವೆ.

ಪಾಲಕ್

ಪಾಲಕ್ ಸೊಪ್ಪಿನಲ್ಲಿ ಕಬ್ಬಿಣ ಮತ್ತು ವಿಟಮಿನ್ ಸಿ ಹೇರಳವಾಗಿದ್ದು, ಕೂದಲು ಬೇಗ ಬೆಳೆಯಲು ಸಹಾಯ ಮಾಡುತ್ತದೆ.

ಸಾರ್ಡೀನ್‌ಗಳು

ಸಾರ್ಡೀನ್‌ಗಳಲ್ಲಿ ಒಮೆಗಾ -3 ಕೊಬ್ಬಿನಾಮ್ಲಗಳು ಹೆಚ್ಚಾಗಿ ಕಂಡು ಬರುತ್ತದೆ. ಇದು ಕೂದಲು ಉದುರುವಿಕೆಯನ್ನು ನಿಯಂತ್ರಿಸಲು ಸಹಾಯಕವಾಗಿವೆ.

ಜಾಮೂನ್

ಜಾಮೂನ್ ಅಥವಾ ನೇರಳೆ ಹಣ್ಣುಗಳಲ್ಲಿ ಉತ್ಕರ್ಷಣ ನಿರೋಧಕಗಳು ಮತ್ತು ವಿಟಮಿನ್ ಸಿ ಸಮೃದ್ಧವಾಗಿದೆ, ಇದು ಕೂದಲನ್ನು ಬುಡದಿಂದ ಬಲಪಡಿಸುತ್ತದೆ.

ಚಿಯಾ ಬೀಜಗಳು

ಚಿಯಾ ಬೀಜಗಳು ಪೌಷ್ಟಿಕಾಂಶದ ಶಕ್ತಿ ಕೇಂದ್ರವಾಗಿದೆ. ಚಿಯಾ ಬೀಜಗಳಲ್ಲಿ ಪ್ರೋಟೀನ್ ಕಂಡುಬರುತ್ತದೆ ಮತ್ತು ನಿಮ್ಮ ನೆತ್ತಿಯನ್ನು ಆರೋಗ್ಯಕರವಾಗಿರಿಸುತ್ತದೆ. ದಟ್ಟವಾದ, ಬಲವಾದ ಕೂದಲನ್ನು ಪಡೆಯಲು ಇದು ತುಂಬಾ ಪ್ರಯೋಜನಕಾರಿ ಆಗಿದೆ.

ಮೊಳಕೆಕಾಳು

ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿರುವ ಮೊಳಕೆ ಕಾಳುಗಳು ಕೂದಲಿನ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಆರೋಗ್ಯ ತಜ್ಞರ ಪ್ರಕಾರ, ನಿಮ್ಮ ಡಯಟ್ನಲ್ಲಿ ಮೊಳಕೆ ಕಾಳುಗಳನ್ನು ಸೇರಿಸುವುದರಿಂದ ಕೆಲವೇ ತಿಂಗಳುಗಳಲ್ಲಿ ಕೂದಲಿನಲ್ಲಿ ದೊಡ್ಡ ಬದಲಾವಣೆಯನ್ನು ಕಾಣಬಹುದು.

ಧಾನ್ಯಗಳು

ಧಾನ್ಯಗಳಲ್ಲಿ ಕಬ್ಬಿಣ, ಸತು ಮತ್ತು ಬಿ ಜೀವಸತ್ವಗಳು ಮತ್ತು ಬಯೋಟಿನ್‌ನಲ್ಲಿ ಸಮೃದ್ಧವಾಗಿವೆ. ಇವು ಕೂದಲ ಬೆಳವಣಿಗೆಗೆ ಸಹಕಾರಿ ಆಗಿವೆ. ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಕೆಲವು ಸಂಶೋಧನೆ ಹಾಗೂ ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story