ಮನೆಯ ಮುಂದೆ ಬಾಲ್ಕನಿ ಅಥವಾ ಟೆರೇಸ್ ನಲ್ಲಿ ಹಲವು ರೀತಿಯ ಹೂವುಗಳು ಅರಳಿ ನಿಂತರೆ ಮನೆಯ ಅಂದ ಹೆಚ್ಚುತ್ತದೆ. ಮನೆಯಲ್ಲಿ ಚೆಂಡು ಹೂವು ಅಥವಾ ಗೊಂಡೆ ಹೂವಿನ ಗಿಡವನ್ನು ನೆಟ್ಟರೆ ಅದಕ್ಕೆ ಈ ಗೊಬ್ಬರ ಹಾಕಲೇ ಬೇಕು.
20 ರಿಂದ 25 ದಿನಗಳ ಅಂತರದಲ್ಲಿ ಗಿಡಕ್ಕೆ ಎರೆಹುಳು ಗೊಬ್ಬರ ಹಾಕಬೇಕು. ಇದರಿಂದ ಸಸಿ ತುಂಬಾ ಹೂವು ಅರಳಿ ನಿಲ್ಲುತ್ತದೆ.
ಒಂದು ಪಾತ್ರೆಯಲ್ಲಿ ನೀರು ತೆಗೆದುಕೊಂಡು ಅದಕ್ಕೆ 10 ಗ್ರಾಂ ಸ್ಪಟಿಕ ಹಾಕಿ. ನಂತರ ಈ ನೀರನ್ನು ಗಿಡಕ್ಕೆ ಹಾಕಿ.
20 ರಿಂದ 25 ದಿನಗಳ ಅಂತರದಲ್ಲಿ ಸಗಣಿ ಗೊಬ್ಬರವನ್ನು ಗಿಡದ ಬುಡಕ್ಕೆ ಹಾಕುವುದರಿಂದ ಒಳ್ಳೆಯ ಹೂವು ಬಿಡುತ್ತದೆ.
ಸಾಸಿವೆ ಗೊಬ್ಬರವನ್ನು ಒಂದು ಲೀಟರ್ ನೀರಿನಲ್ಲಿ 24 ಗಂಟೆ ನೆನೆ ಹಾಕಿ ನಂತರ ಈ ನೀರನ್ನು ಗಿಡಕ್ಕೆ ಹಾಕಬೇಕು.
ಗಿಡಕ್ಕೆ ಪೊಟ್ಯಾಶ್ ಹಾಕುವುದರಿಂದ ಸಸಿಯಲ್ಲಿ ಉತ್ತಮ ಸಂಖ್ಯೆಯಲ್ಲಿ ಹೂವು ಬಿಡುತ್ತದೆ.
ಕಾಫಿ ಬೀಜವನ್ನು ರುಬ್ಬಿ ಪುಡಿ ಮಾಡಿ ಗಿಡದ ಬುಡಕ್ಕೆ ಹಾಕಿದರೆ ಸಸಿ ತುಂಬಾ ಹೂವೇ ಕಾಣಿಸುತ್ತದೆ.
ಬಾಳೆ ಸಿಪ್ಪೆಯಲ್ಲಿ ಪೊಟ್ಯಾಶಿಯಂನ ಪ್ರಮಾಣ ಹೆಚ್ಚಾಗಿರುತ್ತದೆ. ಬಾಳೆ ಸಿಪ್ಪೆಯನ್ನು ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡಿ ಸಸಿಗೆ ಹಾಕಿದರೆ ಚೆನ್ನಾಗಿ ಹೂವು ಬಿಡುತ್ತದೆ.
ನೀವು ಕೂಡಾ ಚೆಂಡು ಹೂವಿನ ಗಿಡ ನೆಟ್ಟಿದ್ದರೆ ಈ ಮೇಲೆ ತಿಳಿಸಿದ ಗೊಬ್ಬರವನ್ನು ಬಳಸಬಹುದು.