ಹಿಂದಿ

ಭಾರತದಲ್ಲಿ ಅತಿ ಹೆಚ್ಚು ಮಾತನಾಡುವ ಭಾಷೆ ಎಂದರೆ ಹಿಂದಿ. ಭಾರತದಲ್ಲಿ 43.63% ಜನ ಹಿಂದಿ ಮಾತನಾಡುತ್ತಾರೆ.

ಬಂಗಾಳಿ

ಭಾರತದಲ್ಲಿ ಅತಿ ಹೆಚ್ಚು ಮಾತನಾಡುವ ಎರಡನೇ ಭಾಷೆ ಬಂಗಾಳಿ. ದೇಶದಲ್ಲಿ 8.03% ಜನ ಬಂಗಾಳಿ ಭಾಷೆ ಮಾತನಾಡುತ್ತಾರೆ.

ಮರಾಠಿ

ಭಾರತದಲ್ಲಿ 6.86% ಜನ ಮರಾಠಿ ಭಾಷೆ ಮಾತನಾಡುತ್ತಾರೆ. ಈ ಭಾಷೆ ದೇಶದಲ್ಲಿ ಮೂರನೇ ಅತಿಹೆಚ್ಚು ಮಾತನಾಡುವ ಭಾಷೆಯಾಗಿದೆ.

ತೆಲುಗು

ದ್ರಾವೀಡ ಭಾಷೆಗಳಲ್ಲಿ ಒಂದಾದ ತೆಲುಗು ಭಾಷೆಯನ್ನು ದೇಶದಲ್ಲಿ 6.70% ಜನರು ಮಾತನಾಡುತ್ತಾರೆ. ಇದು ದೇಶದಲ್ಲಿ ಹೆಚ್ಚು ಮಾತನಾಡುವ ನಾಲ್ಕನೇ ಭಾಷೆ.

ತಮಿಳು

ಭಾರತದಲ್ಲಿ ಅತಿ ಹೆಚ್ಚು ಮಾತನಾಡುವ ಐದನೇ ಭಾಷೆ ತಮಿಳು. ಶೇ. 5.70ರಷ್ಟು ಜನರು ಈ ಭಾಷೆಯನ್ನು ಮಾತನಾಡುತ್ತಾರೆ.

ಗುಜರಾತಿ

ದೇಶದಲ್ಲಿ ಅತಿ ಹೆಚ್ಚು ಮಾತನಾಡುವ ಆರನೇ ಭಾಷೆ ಎಂದರೆ ಗುಜರಾತಿ. ಈ ಭಾಶೆಯನ್ನು ದೇಶದ 4.58% ಜನ ಮಾತಾಡ್ತಾರೆ.

ಉರ್ದು

ಭಾರತದಲ್ಲಿ ಅತಿ ಹೆಚ್ಚು ಮಾತನಾಡುವ ಏಳನೇ ಭಾಷೆ ಎಂದರೆ ಉರ್ದು. ಉರ್ದು ಭಾಶೆಯನ್ನು ದೇಶದ 4.19% ಜನ ಮಾತಾಡ್ತಾರೆ.

ಕನ್ನಡ

ಭಾರತದಲ್ಲಿ ಅತಿ ಹೆಚ್ಚು ಮಾತನಾಡುವ ಎಂಟನೇ ಭಾಷೆ ಎಂದರೆ ನಮ್ಮ ಕಸ್ತೂರಿ ಕನ್ನಡ. ಈ ಭಾಷೆಯನ್ನು ದೇಶದ 3.61% ಜನರು ಮಾತನಾಡುತ್ತಾರೆ.

ಒಡಿಯಾ

ಒಡಿಯಾ ಭಾಷೆಯನ್ನು ದೇಶದಲ್ಲಿ ಅತಿ ಹೆಚ್ಚು ಮಾತನಾಡುವ ಒಂಬತ್ತನೇ ಭಾಷೆ ಎಂದು ಹೇಳಲಾಗುತ್ತದೆ. ದೇಶದ 3.10% ಜನರು ಒಡಿಯಾ ಭಾಷೆ ಮಾತನಾಡುತ್ತಾರೆ.

ಮಲಯಾಳಂ

ದೇಶದ ಅತಿ ಹೆಚ್ಚು ಮಾತನಾಡುವ ಟಾಪ್ 10 ಭಾಷೆಗಳಲ್ಲಿ ಮಲಯಾಳಂ ಹತ್ತನೇ ಸ್ಥಾನದಲ್ಲಿದೆ. ಈ ಭಾಶೆಯನ್ನು ದೇಶದ 2.88% ಜನರು ಮಾತನಾಡುತ್ತಾರೆ.

VIEW ALL

Read Next Story