ಭಾರತೀಯ ನಾಗರಿಕರು ವೀಸಾ ಮುಕ್ತವಾಗಿ ಪ್ರಯಾಣಿಸಬಹುದಾದ ದೇಶಗಳಿವು

Yashaswini V
Sep 21,2023

ಭೂತಾನ್

ಭೂತಾನ್ ಭಾರತೀಯ ಪಾಸ್‌ಪೋರ್ಟ್ ಹೊಂದಿರುವವರಿಗೆ ವೀಸಾ ಇಲ್ಲದೆ ಭೇಟಿ ನೀಡಲು ಅನುಮತಿಸುತ್ತದೆ.

ನೇಪಾಳ

ನೇಪಾಳವು ಭಾರತದ ನೆರೆಯ ರಾಷ್ಟ್ರವಾಗಿದೆ ಮತ್ತು ಭಾರತೀಯ ನಾಗರಿಕರಿಗೆ ವೀಸಾ-ಮುಕ್ತ ಪ್ರವೇಶವನ್ನು ನೀಡುತ್ತದೆ.

ಮಾಲ್ಡೀವ್ಸ್

ಉಷ್ಣವಲಯದ ಸ್ವರ್ಗ ಎಂತಲೇ ಖ್ಯಾತಿ ಪಡೆದಿರುವ ಮಾಲ್ಡೀವ್ಸ್ ಗೆ ಭೇಟಿ ನೀಡಲು ಭಾರತೀಯ ಪ್ರವಾಸಿಗರಿಗೆ ವೀಸಾ ಅಗತ್ಯವಿಲ್ಲ.

ಮಾರಿಷಸ್

ಮಾರಿಷಸ್ ಗೆ ಭೇಟಿ ನೀಡಬಯಸುವ ಭಾರತೀಯರಿಗೆ ವೀಸಾ ಅವಶ್ಯಕತೆ ಇರುವುದಿಲ್ಲ.

ಜಮೈಕಾ

ಈ ಜನಪ್ರಿಯ ಕೆರಿಬಿಯನ್ ದ್ವೀಪವು ಭಾರತೀಯ ಪಾಸ್‌ಪೋರ್ಟ್ ಹೊಂದಿರುವವರಿಗೆ 90 ದಿನಗಳವರೆಗೆ ವೀಸಾ ಮುಕ್ತವಾಗಿರಲು ಅನುಮತಿಸುತ್ತದೆ.

ಕಝಾಕಿಸ್ತಾನ್

ಈ ಮಧ್ಯ ಏಷ್ಯಾ ದೇಶಕ್ಕೆ ಭೇಟಿ ನೀಡಲು ನಿಮಗೆ ವೀಸಾ ಅಗತ್ಯವಿಲ್ಲ.

ಮೈಕ್ರೋನೇಶಿಯಾ

ಪಶ್ಚಿಮ ಪೆಸಿಫಿಕ್ ಸಾಗರದಲ್ಲಿರುವ ಈ ದೇಶವು ಭಾರತೀಯರಿಗೆ ವೀಸಾ ಮುಕ್ತ ಪ್ರಯಾಣವನ್ನು ಅನುಮತಿಸುತ್ತದೆ.

ಇಂಡೋನೇಷ್ಯಾ

ಈ ಆಗ್ನೇಯ ಏಷ್ಯಾದ ರಾಷ್ಟ್ರವು ಭಾರತೀಯ ನಾಗರಿಕರಿಗೆ 30 ದಿನಗಳವರೆಗೆ ವೀಸಾ ಮುಕ್ತವಾಗಿ ದೇಶಕ್ಕೆ ಭೇಟಿ ನೀಡಲು ಅವಕಾಶ ನೀಡುತ್ತದೆ.

ಹೈಟಿ

ಹೈಟಿಯು ಭಾರತೀಯ ಪಾಸ್‌ಪೋರ್ಟ್ ಹೊಂದಿರುವವರಿಗೆ 90 ದಿನಗಳವರೆಗೆ ವೀಸಾ-ಮುಕ್ತ ಪ್ರವೇಶವನ್ನು ನೀಡುತ್ತದೆ.

ಮ್ಯಾನ್ಮಾರ್

ಬೌದ್ಧ ದೇವಾಲಯಗಳಿಗೆ ಹೆಸರುವಾಸಿ ಆದ ಮ್ಯಾನ್ಮಾರ್ ಕೂಡ ಭಾರತೀಯ ಪ್ರವಾಸಿಗರಿಗೆ ವೀಸಾ ಮುಕ್ತ ಪ್ರಯಾಣಕ್ಕೆ ಅವಕಾಶ ಕಲ್ಪಿಸುತ್ತದೆ.

VIEW ALL

Read Next Story