ಅದೃಷ್ಟದ ಜೊತೆ ಆದಾಯವನ್ನು ಅಯಸ್ಕಾಂತದಂತೆ ಆಕರ್ಷಿಸುವ ಒಳಾಂಗಣ ಸಸ್ಯಗಳು

ಮನೆಯನ್ನು ಸುಂದರವಾಗಿಸುವುದರ ಭಾಗವಾಗಿ ಅಂಗಳ ಮತ್ತು ಮನೆಯೊಳಗೆ ಹೆಚ್ಚಾಗಿ ಗಿಡಗಳನ್ನು ಬೆಳೆಸುತ್ತಾರೆ. ಆದರೆ ಮನೆಯಲ್ಲಿ ಕೆಲವು ಗಿಡಗಳನ್ನು ಇಟ್ಟುಕೊಳ್ಳುವುದರಿಂದ ವಾಸ್ತು ಪ್ರಕಾರ ತುಂಬಾ ಒಳ್ಳೆಯದು ಎಂದು ನಿಮಗೆ ತಿಳಿದಿದೆಯೇ?

ಅದೃಷ್ಟದ ಗಿಡ

ಮನೆಯಲ್ಲಿ ಕೆಲವೊಂದು ಗಿಡಗಳನ್ನು ಬೆಳೆಸುವುದರಿಂದ ಧನಾತ್ಮಕತೆ ಮಾತ್ರವಲ್ಲದೆ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತವೆ. ಅಂತಹ ಸಸ್ಯಗಳು ಮನೆಯಲ್ಲಿ ಹಣದ ಹರಿವನ್ನು ಸಹ ಹೆಚ್ಚಿಸುತ್ತವೆ.

ಅದೃಷ್ಟದ ಸಸ್ಯ

ಮನೆಗೆ ಅದೃಷ್ಟದ ಸಸ್ಯಗಳ ಬಗ್ಗೆ ಮಾತನಾಡುವಾಗ ಮೊದಲು ಮನಸ್ಸಿಗೆ ಬರುವ ಗಿಡ ಮನಿ ಪ್ಲಾಂಟ್. ಆದರೆ ಮನಿ ಪ್ಲಾಂಟ್ ಹೊರತುಪಡಿಸಿ ಮನೆಗೆ ಸಮೃದ್ಧಿಯನ್ನು ತರುವ ಇತರ ಸಸ್ಯಗಳಿವೆ.

ಲಕ್ಕಿ ಬ್ಯಾಂಬೂ

ವಾಸ್ತು ಶಾಸ್ತ್ರದಲ್ಲಿ ಲಕ್ಕಿ ಬ್ಯಾಂಬೂ ಪ್ಲಾಂಟ್ ಬಹಳ ಮುಖ್ಯ. ಇನ್ನು ಕನ್ನಡದಲ್ಲಿ ಬಿದಿರಿನ ಗಿಡ ಎಂದು ಕರೆಯುತ್ತೇವೆ. ಇದನ್ನು ಮನೆಯೊಳಗೆ ಅಥವಾ ಮನೆಯ ಮುಂದೆ ನೆಡುವುದು ತುಂಬಾ ಮಂಗಳಕರ. ಬಿದಿರಿನ ಗಿಡಗಳನ್ನು ಈಶಾನ್ಯ ಅಥವಾ ಉತ್ತರ ದಿಕ್ಕಿನಲ್ಲಿ ಬೆಳೆಯಬೇಕು. ಹೀಗೆ ಮಾಡಿದರೆ ಜೀವನದಲ್ಲಿ ಮಹತ್ತರವಾದ ಬದಲಾವಣೆಯನ್ನು ಕಾಣುವಿರಿ.

ಗರಿಕೆ

ಬರ್ಮುಡಾ ಗ್ರಾಸ್ ಅಥವಾ ಗರಿಕೆಯನ್ನು ಮನೆಯಲ್ಲಿ ಬೆಳೆಯಿರಿ. ಅಂದಹಾಗೆ ಗಣಪತಿ ಪೂಜೆಯಲ್ಲಿ ಗರಿಕೆ ಅತೀ ಅಗತ್ಯವಾಗಿ ಬೇಕು. ಅಂತಹ ಹುಲ್ಲನ್ನು ಮನೆಯಲ್ಲಿ ಬೆಳೆದರೆ ಸಂಪತ್ತು ಮತ್ತು ಸಮೃದ್ಧಿಯನ್ನು ತರುತ್ತದೆ.

ದಾಳಿಂಬೆ ಗಿಡ

ದಾಳಿಂಬೆ ಆರೋಗ್ಯಕ್ಕೆ ಉತ್ತಮವಾದ ಹಣ್ಣು ಮಾತ್ರವಲ್ಲ, ಇದರ ಸಸ್ಯವು ಮನೆಯ ಸಮೃದ್ಧಿಗೆ ತುಂಬಾ ಒಳ್ಳೆಯದು. ಇದನ್ನು ಮನೆಯಲ್ಲಿ ಬೆಳೆಸಿದರೆ ಸಾಲದ ಬಾಧೆಯಿಂದ ಮುಕ್ತಿ ಸಿಗುತ್ತದೆ. ಆದಾಯ ಕೂಡ ಹೆಚ್ಚಾಗುತ್ತದೆ. ಆದರೆ ದಾಳಿಂಬೆ ಗಿಡವನ್ನು ಮನೆಯ ನೈಋತ್ಯ ದಿಕ್ಕಿನಲ್ಲಿ ಎಂದಿಗೂ ನೆಡಬಾರದು.

ಸೂಚನೆ

ಈ ಲೇಖನವು ಸಾರ್ವಜನಿಕ ನಂಬಿಕೆಗಳನ್ನು ಆಧರಿಸಿದೆ. ಜೊತೆಗೆ ಅಂತರ್ಜಾಲದಲ್ಲಿ ಮಾತ್ರ ಲಭ್ಯವಿರುವ ಮಾಹಿತಿಯಾಗಿದೆ. ಜೀ ಕನ್ನಡ ನ್ಯೂಸ್ ಇದನ್ನು ಪರಿಶೀಲಿಸಿಲ್ಲ. ಇದು ಸಂಪೂರ್ಣವಾಗಿ ನಿಜವೆಂದು ಹೇಳಲು ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ.

VIEW ALL

Read Next Story