ಮನೆಯ ಈ ದಿಕ್ಕಿನಲ್ಲಿ ಬಿಲ್ವಪತ್ರೆ ಇಟ್ಟರೆ ಆಗುವುದು ಲಾಭ

Ranjitha R K
Jul 17,2023


ಬಿಲ್ವಪತ್ರೆಯನ್ನು ಶಿವನಿಗೆ ಅರ್ಪಿಸುವ ಜೊತೆಗೆ ಮನೆಯ ಈ ದಿಕ್ಕಿನಲ್ಲಿ ಇಟ್ಟರೆ ಅತ್ಯಂತ ಶುಭ ಫಲ ನೀಡುತ್ತದೆ.


ವಾಸ್ತುವಿನಲ್ಲಿ ಬಿಲ್ವಪತ್ರೆ ಇಡುವ ನಾಲ್ಕು ಸ್ಥಳಗಳ ಬಗ್ಗೆ ಹೇಳಲಾಗಿದೆ.


ಮನೆಯ ದೇವರಕೋಣೆಯಲ್ಲಿ ಬಿಲ್ವಪತ್ರೆಯನ್ನು ಇಡುವುದು ಮಂಗಳಕರ ಎಂದು ಹೇಳಲಾಗುತ್ತದೆ. ದೇವರ ಕೋಣೆಯಲ್ಲಿ ಬಿಲ್ವಪತ್ರೆ ಇಟ್ಟರೆ ಈಶ್ವರ ದೇವರು ಪ್ರಸನ್ನನಾಗುತ್ತಾನೆ ಎನ್ನಲಾಗಿದೆ.


ಮೂರು ಎಲೆಗಳಿರುವ ಬಿಲ್ವಪತ್ರೆಯನ್ನು ಸಂಪೂರ್ಣ ಸ್ವಚ್ಚವಾಗಿ ತೊಳೆದು ದೇವರ ಕೋಣೆಯಲ್ಲಿ ಇಡಬೇಕು. ಹರಿದ ಎಲೆಗಳನ್ನು ಎಂದಿಗೂ ಬಳಸಬಾರದು.


ಬಿಲ್ವಪತ್ರೆಯನ್ನು ಗಂಗಾಜಲದಿಂದ ತೊಳೆದು ಪೂಜೆಗೆ ಬಳಸಬೇಕು. ಬಿಲ್ವಪತ್ರೆಯ ಮೇಲೆ ಶ್ರೀಗಂಧದಿಂದ ಓಂ ಎಂದು ಬರೆದು, ಅಕ್ಷತೆ ಅರ್ಪಿಸಿ ಪೂಜಿಸಬೇಕು.


ಬಿಲ್ವಪತ್ರೆಯನ್ನು ಇಡಲು ಸ್ಥಳ ಸಾಕಾಗುವುದಿಲ್ಲ ಎಂದಾದರೆ ಅದನ್ನು ನೇತು ಕೂಡಾ ಹಾಕಬಹುದು. ಆದರೆ ಕೊಳಕು ಕೈಗಳಿಂದ ಎಂಜಲು ಕೈಗಳಿಂದ ಯಾವತ್ತೂ ಬಿಲ್ವಪತ್ರೆಯನ್ನು ಮುಟ್ಟಬಾರದು.


ಬಿಲ್ವಪತ್ರೆಯನ್ನು ಚತುರ್ಥಿ, ಅಷ್ಟಮಿ, ನವಮಿ ತಿಥಿಯಂದು ಕೀಳಬೇಕು, ಮನೆಯಲ್ಲಿ ಇದನ್ನೂ ಸೋಮವಾರ ತಂದು ಸರಿಯಾದ ದಿಕ್ಕಿನಲ್ಲಿ ಇರಿಸಬೇಕು.


ನಾಲ್ಕು ಸರಿಯಾದ ದಿಕ್ಕಿನಲ್ಲಿ ಬಿಲ್ವಪತ್ರೆ ಇಡುವ ಮೂಲಕ ಮನೆಯ ದರಿದ್ರ ದೂರ ಮಾಡಬಹುದು.


ಹೀಗೆ ಮಾಡುವುದರಿಂದ ಚಂದ್ರ ದೋಷ, ಕಾಲ ಸರ್ಪ ದೋಷ, ಪಿತೃ ದೋಷ, ಗ್ರಹ ದೋಷ ನಿವಾರಣೆಯಾಗಿ ಸಮೃದ್ದಿಯಾಗುತ್ತದೆ.

VIEW ALL

Read Next Story