ನಾವು ಇಲ್ಲಿ ಕೆಲ ಉಪಾಯಗಳನ್ನು ಉಲ್ಲೇಖಿಸುತ್ತಿದ್ದು, ಈ ಉಪಾಯಗಳು ಕೂದಲಿನ ಆರೋಗ್ಯಕ್ಕೆ ತುಂಬಾ ಲಾಭಕಾರಿ ಎನ್ನಲಾಗುತ್ತದೆ.
ಈ ಉಪಾಯಗಳು ತುಂಬಾ ಸುಲಭವಾಗಿವೆ ಮತ್ತು ಕೂದಲುದುರುವಿಕೆ ಸಮಸ್ಯೆ ದೂರಾಗಿ, ತೆಳುವಾದ ಕೂದಲುಗಳು ದಟ್ಟವಾಗುತ್ತವೆ.
ಮೊಟ್ಟೆ ಕೂದಲಿಗೆ ಬೇಕಾಗುವ ಅತ್ಯಾವಶ್ಯಕ ಪ್ರೊಟೀನ್ ಒದಗಿಸುತ್ತವೆ ಮತ್ತು ಕೂದಲುಗಳ ಟೇಕ್ಷರ್ ಕೂಡ ಇದರಿಂದ ಉತ್ತಮವಾಗುತ್ತದೆ.
ಮೊಟ್ಟೆಯನ್ನು ಒಡೆದು ಅದನ್ನು ಹಾಗೆಯೇ ತಲೆಗೆ ಹಚ್ಚಿ 20 ನಿಮಿಷಗಳ ಬಳಿಕ ಕೂದಲು ತೊಳೆದುಕೊಳ್ಳಿ.
ಬೆಟ್ಟದ ನೆಲ್ಲಿಕಾಯಿ ಕೂದಲಿಗೆ ಒಂದಲ್ಲ ಹಲವು ರೀತಿಯಲ್ಲಿ ಲಾಭಕಾರಿಯಾಗಿದೆ.
ಬೆಟ್ಟದ ನೆಲ್ಲಿಕಾಯಿ ಹಾಗೂ ನಿಂಬೆ ರಸವನ್ನು ಸಮಪ್ರಮಾಣದಲ್ಲಿ ಬಳಸಿ ಕೂದಲಿಗೆ ಅನ್ವಯಿಸಿ, ಸ್ವಲ್ಪ ಸಮಯದ ಬಳಿಕ ಹೇಯರ್ ವಾಶ್ ಮಾಡಿಕೊಳ್ಳಿ.
ಮೆಂತೆ ಕಾಳುಗಳನ್ನು ರಾತ್ರಿಯಿಡೀ ನೆನೆಹಾಕಿ ಬೆಳಗ್ಗೆ ಅದರ ಪೇಸ್ಟ್ ತಯಾರಿಸಿ ಕೂದಲಿಗೆ ಅನ್ವಯಿಸಿ. ಅರ್ಧಗಂಟೆ ಬಿಟ್ಟು ಕೂದಲು ತೊಳೆದುಕೊಳ್ಳಿ.
ಮೆಂತೆ ಕೂದಲುಗಳನ್ನು ಬುಡದಿಂದ ತುದಿಯವರೆಗೆ ಪೋಷಿಸುತ್ತದೆ.
ಒಂದು ಪಾತ್ರೆಯಲ್ಲಿ ಕೊಬ್ಬರಿ ಎಣ್ಣೆ ಹಾಗೂ ಕೆಲ ಕರಿಬೇವಿನ ಎಲೆಗಳನ್ನು ಹಾಕಿ ಸ್ವಲ್ಪಹೊತ್ತು ಬೇಯಿಸಿ, ಗ್ಯಾಸ್ ಓಲೆ ಆರಿಸಿ.
ಈ ಮಿಶ್ರಣ ಉಗುರು ಬೆಚ್ಚಗಾದ ಬಳಿಕ ಅದರಿಂದ ನೆತ್ತಿಯ ಮೇಲೆ ಮಸಾಜ್ ಮಾಡಿಕೊಳ್ಳಿ, ವಾರದಲ್ಲಿ 2 ರಿಂದ ಮೂರು ಬಾರಿ ಈ ಪ್ರಕ್ರಿಯೆ ಪುನರಾವರ್ತಿಸಿ, ಒಂದರಿಂದ ಒಂದೂವರೆ ಗಂಟೆಗಳ ಕಾಲ ಹಾಗೆಯೇ ಬಿಟ್ಟು ತಲೆಯನ್ನು ತೊಳೆದುಕೊಳ್ಳಿ.