ಅವಕಾಡೊ ಚಾಕೊಲೇಟ್ ಸೂಥಿ ರುಚಿಗೆ ಮಾತ್ರವಲ್ಲ ಆರೋಗ್ಯಕ್ಕೂ ಒಳ್ಳೆಯದು. ಇದರ ಫೈಬರ್ ಮತ್ತು ಆ್ಯಂಟಿಆಕ್ಸಿಡೆಂಟ್‌ಗಳು ಹೊಟ್ಟೆಯ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ.
ಕ್ಯಾರೆಟ್‌ನಲ್ಲಿರುವ ಬೀಟಾ ಕ್ಯಾರೋಟಿನ್ ತೂಕ ಇಳಿಸಲು ಸಹಾಯ ಮಾಡುತ್ತದೆ. ಹೊಟ್ಟೆಯ ಸುತ್ತ ಸಂಗ್ರಹವಾಗಿರುವ ಕೊಬ್ಬನ್ನೂ ಕರಗಿಸುತ್ತದೆ ಹಾಗೂ ದೃಷ್ಟಿಯನ್ನು ಸುಧಾರಿಸುತ್ತದೆ.
ಬಾಳೆಹಣ್ಣು, ಬಾದಾಮಿ ಹಾಲು, ಗೋಡಂಬಿ ಮತ್ತು ಕೆನೆ ಮಿಶ್ರಣದೊಂದಿಗೆ ಈ ಸ್ಮೂಥಿಯನ್ನು ತಯಾರಿಸಬಹುದು. ಇದರಲ್ಲಿರುವ ಪೋಷಕಾಂಶಗಳು ಮತ್ತು ಪ್ರೋಟೀನ್‌ಗಳು ನಿಮಗೆ ಶಕ್ತಿಯನ್ನು ನೀಡುವುದು ಮಾತ್ರವಲ್ಲದೆ ಸಂಗ್ರಹವಾದ ಕೊಬ್ಬನ್ನು ಕರಗಿಸುತ್ತದೆ.
ಸ್ಟ್ರಾಬೆರಿ ಮತ್ತು ಬೀಟ್ರೋಟ್ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕರಗಿಸಲು ಸಹಾಯ ಮಾಡುತ್ತದೆ. ಇವುಗಳಿಂದ ತಯಾರಿಸಿದ ಸ್ಮೂಥಿಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಹೊಟ್ಟೆಯ ಸುತ್ತ ಸಂಗ್ರಹವಾಗಿರುವ ಕೊಬ್ಬನ್ನು ಕರಗಿಸಬಹುದು.
ಇದು ಕಡಿಮೆ ಸಕ್ಕರೆ, ಕಡಿಮೆ ಕ್ಯಾಲೋರಿ ಒಳಗೊಂಡಿರುವ ಸ್ಮೂಥಿ. ಇದು ನಿಮ್ಮನ್ನು ಹೈಡ್ರೇಟ್ ಮಾಡುತ್ತದೆ ಮತ್ತು ಕೊಲೆಸ್ಟ್ರಾಲ್ ಅನ್ನು ಕರಗಿಸುತ್ತದೆ. ಈ ಮೂಲಕ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.
ಈ ಸ್ಮೂಥಿ ಮಾಡಲು ಚಿಯಾ ಬೀಜಗಳು, ಲೆಟಿಸ್, ಬಾಳೆಹಣ್ಣುಗಳು, ಆವಕಾಡೊ ಮತ್ತು ಮಾವಿನಹಣ್ಣುಗಳನ್ನು ಮಿಶ್ರಣ ಮಾಡಲಾಗುತ್ತದೆ. ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಇದು ಅತ್ಯುತ್ತಮ ಆಯ್ಕೆಯಾಗಿದೆ.
ತಾಜಾ ಶುಂಠಿ ಮತ್ತು ಅನಾನಸ್ ಅನ್ನು ಸ್ವಲ್ಪ ಮೆಣಸು ಪುಡಿಯೊಂದಿಗೆ ಬೆರೆಸಿ ಈ ಸ್ಮೂಥಿಯನ್ನು ತಯಾರಿಸಲಾಗುತ್ತದೆ. ಜೀರ್ಣಕ್ರಿಯೆಯನ್ನು ಸಹ ಸುಧಾರಿಸುವ ಮೂಲಕ ಹೊಟ್ಟೆಯ ಸುತ್ತ ಸಂಗ್ರಹವಾಗಿರುವ ಕೊಬ್ಬನ್ನು ಕರಗಿಸುವಲ್ಲಿ ಸಹಾಯ ಮಾಡುತ್ತದೆ.