ಪುದೀನ ಆರೋಗ್ಯಕ್ಕಷ್ಟೇ ಅಲ್ಲ ಚರ್ಮದ ಹಲವು ಸಮಸ್ಯೆಗಳಿಗೆ ವರದಾನವಿದ್ದಂತೆ. ಚರ್ಮದ ಸಮಸ್ಯೆಗಳನ್ನು ನಿವಾರಿಸಿ ಕಾಂತಿಯುತ ತ್ವಚೆಗಾಗಿ ಪುದೀನಾ ಫೇಸ್ ಪ್ಯಾಕ್‌ಗಳು ತುಂಬಾ ಸಹಕಾರಿ ಆಗಿವೆ.
ಪುದೀನ ಸೊಪ್ಪನ್ನು ನುಣ್ಣಗೆ ರುಬ್ಬಿ ರದಲ್ಲಿ ಜೇನುತುಪ್ಪ ಬೆರೆಸಿ ಅನ್ವಯಿಸುವುಯರಿಂದ ಎಣ್ಣೆಯುಕ್ತ ಚರ್ಮದಿಂದ ಪರಿಹಾರ ಪಡೆಯಬಹುದು.
ಪುದೀನ ಎಲೆಗಳನ್ನು ರೋಸ್ ವಾಟರ್‌ನೊಂದಿಗೆ ಮಿಕ್ಸ್ ಮಾಡಿ ಚೆನ್ನಾಗಿ ರುಬ್ಬಿ ಮೊಡವೆಗಳ ಮೇಲೆ ಅನ್ವಯಿಸುವುದರಿಂದ ಮೊಡವೆಗಳು ಮತ್ತದರಿಂದ ಉಂಟಾದ ಕಲೆಗಳಿಂದ ಮುಕ್ತಿ ಪಡೆದು ಸುಂದರ ತ್ವಚೆಯನ್ನು ನಿಮ್ಮದಾಗಿಸಬಹುದು.
ಪುದೀನ ಎಲೆಗಳೊಂದಿಗೆ ಟೊಮಾಟೊ ಜ್ಯೂಸ್ ವೆರೆಸಿ ಮುಖಕ್ಕೆ ಹಚ್ಚುವುದರಿಂದ ಮುಖದಲ್ಲಿ ಮೂಡಿರುವ ಕಲೆಗಳು ನಿವಾರಣೆಯಾಗಿ ಕಾಂತಿಯುತ ತ್ವಚೆಯನ್ನು ಹೊಂದಬಹುದು.
ಪುದೀನ ಎಲೆಗಳೊಂದಿಗೆ ಶ್ರೀಗಂಧದ ಪುಡಿಯನ್ನು ಬೆರೆಸಿ ರುಬ್ಬಿ ಮಾಸ್ಕ್ ಆಗಿ ಬಳಸಿ. ಇದರಿಂದ ಚರ್ಮದ ತುರಿಕೆ, ಮೊಡವೆ, ಚರ್ಮದ ದದ್ದುಗಳಂತಹ ಸಮಸ್ಯೆಗಳಿಂದ ಪರಿಹಾರ ಪಡೆಯಬಹುದು.
ನಿತ್ಯ ನೀವು ಕುಡಿಯುವ ನೀರಿನಲ್ಲಿ ಪುದೀನ ಎಲೆಗಳನ್ನು ಬೆರೆಸಿಟ್ಟು ಕುಡಿಯುತ್ತಾ ಬಂದರೆ ಚರ್ಮವು ಆರೋಗ್ಯಕರವಾಗಿರುತ್ತದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.