ತಲೆಹೊಟ್ಟು, ಕೂದಲು ಉದುರುವ ಸಮಸ್ಯೆಗೆ ಈ ಪುಡಿಯೊಂದೆ ಪರಿಹಾರ!
ಚಳಿಗಾಲವು ತಲೆಹೊಟ್ಟು ಬೆಳವಣಿಗೆಗೆ ಸೂಕ್ತ ಸಮಯವಾಗಿದೆ. ಹೀಗಾಗಿ ಮುಂಚಿತವಾಗಿಯೇ ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು.
ಮುಖದ ಚರ್ಮವನ್ನು ಸುಧಾರಿಸಲು ಮುಲ್ತಾನಿ ಮಿಟ್ಟಿಯನ್ನು ಮುಖಕ್ಕೆ ಬಳಸಲಾಗುತ್ತದೆ. ಇದರೊಂದಿಗೆ ಈ ಪುಡಿಯು ಕೂದಲಿಯೂ ಪ್ರಯೋಜನಕಾರಿಯಾಗಿದೆ.
ಮುಲ್ತಾನಿ ಮಿಟ್ಟಿಯಲ್ಲಿ ಮೆಗ್ನೀಸಿಯಮ್, ಕ್ಯಾಲ್ಸಿಯಂ ಮತ್ತು ಸಿಲಿಕಾ ಇರುತ್ತದೆ. ಈ ಮೂರು ಅಂಶಗಳು ನೆತ್ತಿಯಿಂದ ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕುತ್ತದೆ.
ಇದಕ್ಕಾಗಿ ಮುಲ್ತಾನಿ ಮಿಟ್ಟಿಯನ್ನು ಹೇರ್ ಪ್ಯಾಕ್ ಗಳನ್ನಾಗಿ ಮಾಡಿಕೊಳ್ಳಬಹುದು.
ಈ ಹೇರ್ ಪ್ಯಾಕ್ ಗಳು ತಲೆಹೊಟ್ಟು ಸಮಸ್ಯೆಯನ್ನು ದೂರವಿಡುವುದಲ್ಲದೆ ಕೂದಲನ್ನು ಆರೋಗ್ಯವಾಗಿಡುತ್ತವೆ.
ಎರಡು ಚಮಚ ಮುಲ್ತಾನಿ ಮಿಟ್ಟಿಯನ್ನು ಮಿಶ್ರಣವನ್ನು ಅರ್ಧ ನಿಂಬೆ ರಸ ಮತ್ತು ಸ್ವಲ್ಪ ನೀರು ಸೇರಿಸಿ ಅದನ್ನು ಬುಡಕ್ಕೆ ಹಚ್ಚಿ 20 ನಿಮಿಷ ಬಿಟ್ಟು ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ.
ಮುಲ್ತಾನಿ ಮಿಟ್ಟಿ ಮತ್ತು ಎರಡು ಚಮಚ ಮೊಸರು ಎರಡನ್ನೂ ಬೆರೆಸಿ ತಲೆಗೆ ಹಚ್ಚಿ ಅರ್ಧ ಗಂಟೆಯ ನಂತರ ಶಾಂಪೂವಿನಿಂದ ತಲೆ ತೊಳೆಯಿರಿ.
ಎರಡು ಚಮಚ ಮುಲ್ತಾನಿ ಮಿಟ್ಟಿಯಲ್ಲಿ ಅಲೋವೆರಾ ಜೆಲ್ ಹಾಕಿ ಮಿಶ್ರಣ ಮಾಡಿ. 20 ನಿಮಿಷಗಳ ಕಾಲ ನೆತ್ತಿಯ ಮೇಲೆ ಹಚ್ಚಿ ನಂತರ ತೊಳೆಯಿರಿ.