ನೆಮ್ಮದಿಯ ನಿದ್ರೆ ಹಾಗೂ ಜೀವನದಲ್ಲಿ ಅದೃಷ್ಟಕ್ಕಾಗಿ ಬೆಡ್ ರೂಂನಲ್ಲಿ ಕೆಲವು ವಾಸ್ತು ಸಲಹೆಗಳನ್ನು ಅನುಸರಿಸುವುದು ಬಹಳ ಮುಖ್ಯ.
ಉತ್ತರ ದಿಕ್ಕಿನಲ್ಲಿ ತಲೆಯಿಟ್ಟು ಮಲಗುವುದರಿಂದ ನೆಮ್ಮದಿಯ ನಿದ್ರೆಯ ಜೊತೆಗೆ ಉತ್ತಮ ಆರೋಗ್ಯವನ್ನೂ ಹೊಂಡಬಹುದು.
ಮಲಗುವ ಕೋಣೆ ಇಕ್ಕಟ್ಟಿನಿಂದ ಇರಬಾರದು. ಹಾಸಿಗೆಯ ಸುತ್ತಮುತ್ತ ಓಡಾಡಲು ಜಾಗವಿರುವಂತೆ ಇರಬೇಕು. ಇದು ಮನೆಯಲ್ಲಿ ಧನಾತ್ಮಕತೆಯನ್ನು ಹೆಚ್ಚಿಸುತ್ತದೆ.
ಮಲಗುವ ಕೋಣೆಯಲ್ಲಿ ವಾಡ್ರೋಬ್ ಯಾವಾಗಲೂ ವಾಯುವ್ಯ ದಿಕ್ಕಿನಲ್ಲಿ ಇರಬೇಕು.
ಮಲಗುವ ಕೋಣೆಯಲ್ಲಿ ಕನ್ನಡಿಯು ಹಾಸಿಗೆಗೆ ಎದುರಿಗೆ ಇರಬಾರದು. ಬದಲಿಗೆ ಮರೆಯಾಗಿರಬೇಕು.
ಮಲಗುವ ಕೋಣೆಯಲ್ಲಿ ಎಲೆಕ್ಟ್ರಾನಿಕ್ ಗ್ಯಾಜೆಟ್ಸ್ ಇಡುವುದನ್ನು ತಪ್ಪಿಸಬೇಕು. ಇದು ಮನಸ್ಸನ್ನು ಚಂಚಲಗೊಳಿಸುತ್ತದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.