ಅಂಡಮಾನ್-ನಿಕೋಬಾರ್ ದ್ವೀಪಗಳು ಭಾರತದ ಅತಿದೊಡ್ಡ ದ್ವೀಪ ಸಮೂಹವಾಗಿದೆ. ವಿಶಾಖಪಟ್ಟಣಂ ಮತ್ತು ಚೆನ್ನೈನಿಂದಲೂ ಹಡಗುಗಳು ಲಭ್ಯವಿದ್ದು, 60ರಿಂದ 70 ಗಂಟೆ ತೆಗೆದುಕೊಳ್ಳುತ್ತದೆ.
16ನೇ ಶತಮಾನದ ಕೋಟೆ, ನೈದಾ ಗುಹೆಗಳು ನಿಮ್ಮ ಪ್ರಯಾಣವನ್ನು ಸ್ಮರಣೀಯವಾಗಿಸುತ್ತದೆ. ಗುಜರಾತಿನ ಸಾಮೀಪ್ಯದಿಂದಾಗಿ ಇಲ್ಲಿ ಗುಜರಾತಿ ಸಂಸ್ಕೃತಿಯ ಅನುಭವವೂ ಇದೆ.
ಅಸ್ಸಾಂನ ಜೋರ್ಹತ್ ಜಿಲ್ಲೆಯ ಬ್ರಹ್ಮಪುತ್ರ ನದಿಯ ಮಧ್ಯದಲ್ಲಿ ನೆಲೆಗೊಂಡಿರುವ ಮಜುಲಿಯನ್ನು ವಿಶ್ವದ ಅತಿದೊಡ್ಡ ನದಿ ದ್ವೀಪವೆಂದು ಪರಿಗಣಿಸಲಾಗಿದೆ.
ತಮಿಳುನಾಡಿನಲ್ಲಿರುವ ರಾಮೇಶ್ವರಂ ದ್ವೀಪವನ್ನು ಪಂಬನ್ ದ್ವೀಪ ಎಂದೂ ಕರೆಯುತ್ತಾರೆ.
ಸೇಂಟ್ ಮೇರಿಸ್ ದ್ವೀಪಗಳು ವಾಸ್ತವವಾಗಿ ಕರ್ನಾಟಕದ ಉಡುಪಿ ಬಳಿ ಅರಬ್ಬಿ ಸಮುದ್ರದಲ್ಲಿರುವ 4 ಸಣ್ಣ ದ್ವೀಪಗಳ ಗುಂಪಾಗಿದೆ.