ವಾರಕ್ಕೊಮ್ಮೆ ಈ ಎಣ್ಣೆ ಹಚ್ಚಿದರೆ ಬೊಕ್ಕತಲೆಯಲ್ಲೂ ದಷ್ಟಪುಷ್ಟವಾಗಿ ಕಡುಕಪ್ಪು ಕೂದಲು ಬೆಳೆಯುವುದು

Bhavishya Shetty
Dec 18,2024

ಕೂದಲು ಉದುರುವಿಕೆ

ಕೂದಲು ಉದುರುವಿಕೆಯಿಂದ ಮಹಿಳೆಯರು ಹೆಚ್ಚು ತೊಂದರೆಗೊಳಗಾಗುತ್ತಾರೆ. ಕೆಲವೊಮ್ಮೆ ಕೂದಲು ಉದುರುವುದು ಸಹಜ, ಆದರೆ ಅತಿಯಾಗಿ ಉದುರಲು ಪ್ರಾರಂಭಿಸಿದಾಗ ತಲೆ ಬೋಳಾಗಬಹುದು. ಕೂದಲಿಗೆ ಅಗತ್ಯವಾದ ಪೋಷಕಾಂಶಗಳು ಸಿಗದಿದ್ದರೆ ಅಥವಾ ಕೂದಲಿಗೆ ಸರಿಯಾದ ಕಾಳಜಿಯನ್ನು ತೆಗೆದುಕೊಳ್ಳದಿದ್ದರೆ ಇದು ಸಂಭವಿಸುತ್ತದೆ.

ಹೇರ್ ಆಯಿಲ್

ಕೂದಲಿಗೆ ಕೆಲವು ವಿಶೇಷ ಹೇರ್ ಆಯಿಲ್ ಅನ್ನು ಹಚ್ಚಬಹುದು. ಈ ಎಣ್ಣೆಗಳು ಕೂದಲಿಗೆ ಬೇರಿನಿಂದ ತುದಿಯವರೆಗೆ ಅಗತ್ಯವಾದ ತೇವಾಂಶ ಮತ್ತು ಪೋಷಣೆಯನ್ನು ಒದಗಿಸುತ್ತವೆ

ಈರುಳ್ಳಿ ಎಣ್ಣೆ

ಕೂದಲು ಉದುರುವುದನ್ನು ತಡೆಯುವ ಅತ್ಯುತ್ತಮ ಎಣ್ಣೆಗಳಲ್ಲಿ ಈರುಳ್ಳಿ ಎಣ್ಣೆಯೂ ಒಂದು. ಈರುಳ್ಳಿಯನ್ನು ಕತ್ತರಿಸಿ ಅದರ ರಸವನ್ನು ತೆಗೆಯಿರಿ. ಈಗ ತೆಂಗಿನ ಎಣ್ಣೆಯನ್ನು ಬಿಸಿ ಮಾಡಿ ಅದಕ್ಕೆ ಈರುಳ್ಳಿ ರಸವನ್ನು ಸೇರಿಸಿ ಕುದಿಸಿ. ಬಳಿಕ ತಣ್ಣಗಾದ ನಂತರ, ಈ ಎಣ್ಣೆಯನ್ನು ತಲೆಗೆ ಮಸಾಜ್ ಮಾಡಿ. ಇದು ಕೂದಲು ಉದುರುವಿಕೆಯನ್ನು ಕಡಿಮೆ ಮಾಡುತ್ತದೆ.

ಮೆಂತ್ಯ ಎಣ್ಣೆ

ಮೆಂತ್ಯ ಎಣ್ಣೆಯನ್ನು ತಯಾರಿಸಲು, ಒಂದು ಪಾತ್ರೆಯಲ್ಲಿ ಮೆಂತ್ಯ ಹಾಕಿ ಹುರಿಯಿರಿ. ಈಗ ಇದಕ್ಕೆ ಕರಿಬೇವು ಮತ್ತು ಎಣ್ಣೆಯನ್ನು ಸೇರಿಸಿ ಚೆನ್ನಾಗಿ ಕುದಿಸಿ. ಇದನ್ನು ವಾರಕ್ಕೊಮ್ಮೆ ಕೂದಲಿಗೆ ಹಚ್ಚಿದರೆ ಕೂಡ ಸಾಕು. ಮೆಂತ್ಯದಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಕೂದಲಿನಿಂದ ತಲೆಹೊಟ್ಟು ಮತ್ತು ತುರಿಕೆಯನ್ನೂ ಹೋಗಲಾಡಿಸುತ್ತದೆ.

ದಾಸವಾಳ ಎಣ್ಣೆ

ದಾಸವಾಳ ಹೂವಿನಿಂದ ತಯಾರಿಸಿದ ಈ ಎಣ್ಣೆ ಕೂದಲು ಉದುರುವುದನ್ನು ನಿಲ್ಲಿಸುತ್ತದೆ. ಮತ್ತು ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಇದನ್ನು ತಯಾರಿಸಲು, ಒಂದು ಪಾತ್ರೆಯಲ್ಲಿ ತೆಂಗಿನ ಎಣ್ಣೆಯನ್ನು ಬಿಸಿ ಮಾಡಿ. ಈಗ ದಾಸವಾಳದ ಹೂವನ್ನು ರುಬ್ಬಿಕೊಂಡು ಕಾದ ಎಣ್ಣೆಗೆ ಹಾಕಿ ಸ್ವಲ್ಪ ಹೊತ್ತು ಕುದಿಸಿ. ಈ ಸಿದ್ಧಪಡಿಸಿದ ಎಣ್ಣೆಯಿಂದ ತಲೆಯನ್ನು ಮಸಾಜ್ ಮಾಡಿ.

ಸೂಚನೆ

ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಅರ್ಹ ವೈದ್ಯಕೀಯ ಅಭಿಪ್ರಾಯಕ್ಕೆ ಯಾವುದೇ ರೀತಿಯಲ್ಲಿ ಪರ್ಯಾಯವಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞ ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಈ ಮಾಹಿತಿಯ ಹೊಣೆಯನ್ನು ಜೀ ಕನ್ನಡ ನ್ಯೂಸ್‌ ಹೇಳಿಕೊಳ್ಳುವುದಿಲ್ಲ.

VIEW ALL

Read Next Story