ಸೌಂದರ್ಯವರ್ಧಕ ಪರಂಗಿ ಫೇಸ್ ಪ್ಯಾಕ್‌ಗಳು

Yashaswini V
Jan 23,2024

ಪರಂಗಿಹಣ್ಣು

ಪರಂಗಿಹಣ್ಣು ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ನಿಮಗೆ ತಿಳಿದೇಯಿದೆ. ಆದರಿದು ಸೌಂದರ್ಯವರ್ಧಕವೂ ಹೌದು.

ತ್ವಚೆಗಾಗಿ ಪಪ್ಪಾಯಿ

ಪರಂಗಿಯ ಫೇಸ್ ಪ್ಯಾಕ್ ಬಳಕೆಯಿಂದ ಸುಂದರವಾದ ತ್ವಚೆಯನ್ನು ನಿಮ್ಮದಾಗಿಸಲು ಇಲ್ಲಿದೆ ಕೆಲವು ಸಿಂಪಲ್ ಸಲಹೆಗಳು...

ಪಪ್ಪಾಯಿ-ನಿಂಬೆ

ಪರಂಗಿಹಣ್ಣಿನೊಂದಿಗೆ ನಿಂಬೆರಸವನ್ನು ಬೆರೆಸಿ ಹಚ್ಚುವುದರಿಂದ ಇದು ಡೆಡ್ ಸ್ಕಿನ್ ಸಮಸ್ಯೆಯನ್ನು ನಿವಾರಿಸುತ್ತದೆ.

ಪಪ್ಪಾಯಿ-ಟೊಮಾಟೊ

ಮೃದುವಾದ ಚರ್ಮಕ್ಕಾಗಿ ಟೊಮಾಟೊ ತುಂಬಾ ಪ್ರಯೋಜನಕಾರಿ. ನೀವು ಪರಂಗಿಹಣ್ಣಿನ ಜೊತೆಗೆ ಟೊಮಾಟೊ ಬೆರೆಸಿ ಮ್ಯಾಶ್ ಮಾಡಿ ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ 15 ನಿಮಿಷಗಳ ಬಳಿಕ ಫೇಸ್ ವಾಶ್ ಮಾಡಿ. ಇದರಿಂದ ಕಾಂತಿಯುತ ತ್ವಚೆ ನಿಮ್ಮದಾಗುತ್ತದೆ.

ಪಪ್ಪಾಯಿ- ಜೇನು

ಹಿಸುಕಿದ ಪಪ್ಪಾಯಿಯಲ್ಲಿ 1 ಚಮಚ ಜೇನುತುಪ್ಪವನ್ನು ಬೆರೆಸಿ ಮುಖಕ್ಕೆ ಹಚ್ಚಿ 15 ನಿಮಿಷಗಳ ನಂತರ ಮುಖ ತೊಳೆಯಿರಿ. ಇದರಿಂದ ತ್ವಚೆಯನ್ನು ಒಳಗಿನಿಂದ ಸುಂದರವಾಗಿಸಬಹುದು.

ಪಪ್ಪಾಯಿ-ಕಿತ್ತಳೆ ರಸ

ಹಿಸುಕಿದ ಪಪ್ಪಾಯಿಯಲ್ಲಿ ಕನಿಷ್ಠ 10-15 ಹನಿ ಕಿತ್ತಳೆ ರಸವನ್ನು ಸೇರಿ ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ 10 ನಿಮಿಷಗಳ ನಂತರ ಮುಖ ತೊಳೆಯಿರಿ. ಇದರಿಂದ ಮುಖದಲ್ಲಿರುವ ಕಲೆಗಳು ನಿವಾರಣೆಯಾಗುತ್ತದೆ.

ಪಪ್ಪಾಯಿ-ಬಾಳೆಹಣ್ಣು

ಹಿಸುಕಿದ ಪಪ್ಪಾಯಿಯಲ್ಲಿ ಬಾಳೆಹಣ್ಣನ್ನು ಚೆನ್ನಾಗಿ ಮ್ಯಾಶ್ ಮಾಡಿ ಇದನ್ನು ಮುಖಕ್ಕೆ ಹಚ್ಚಿ 15 ನಿಮಿಷಗಳ ಬಳಿಕ ಮುಖ ತೊಳೆಯಿರಿ. ಇದರಿಂದ ಮೊಡವೆಯನ್ನು ನಿವಾರಿಸಬಹುದು. ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

VIEW ALL

Read Next Story