ಸೋರೆಕಾಯಿ ಎಲ್ಲರಿಗೂ ಇಷ್ಟವಾಗುವುದಿಲ್ಲ. ಆದರೆ ಇದರ ಹೂವಿನಿಂದ ರುಚಿಕರವಾದ ಖಾದ್ಯಗಳನ್ನು ತಯಾರಿಸಬಹುದು.
ಸೋರೆಕಾಯಿ ಹೂವಿನ ಗ್ರೇವಿ ತಿನ್ನಲು ಬಹಳ ರುಚಿಕರವಾಗಿರುತ್ತದೆ. ಇದನ್ನೂ ಒಮ್ಮೆ ತಿಂದರೆ ಮತ್ತೆ ಮತ್ತೆ ತಿನ್ನಬೇಕು ಅನಿಸುತ್ತದೆ.
ಈ ಗ್ರೇವಿ ತಯಾರಿಸಲು ಮೊದಲು ಸೋರೆಕಾಯಿ ಹೂವನ್ನು ಪಕೋಡಾದಂತೆ ಎಣ್ಣೆಯಲ್ಲಿ ಕರಿಯಬೇಕು. ನಂತರ ಮಾಮೂಲಿ ಮಸಾಲೆಗಳನ್ನು ಬಳಸಿ ಗ್ರೇವಿ ತಯಾರಿಸಿಕೊಳ್ಳಿ .
ಸೋರೆಕಾಯಿ ಹೂವನ್ನು ಬಳಸಿ ರುಚಿಕರ ಪಕೋಡಾಗಳನ್ನು ತಯಾರಿಸಬಹುದು.
ಇದನ್ನು ತಯಾರಿಸಲು ಸೋರೆಕಾಯಿ ಹೂವುಗಳನ್ನು ತೊಳೆದು ನಂತರ ಅದನ್ನು ಕಡಲೆ ಹಿಟ್ಟಿನಲ್ಲಿ ಅದ್ದಿಕೊಳ್ಳಿ . ನಂತರ ಎಣ್ಣೆ ಬಿಸಿಯಾದ ಮೇಲೆ ಇದನ್ನೂ ಎಣ್ಣೆಯಲ್ಲಿ ಕರಿಯಿರಿ.
ಇದು ನೋಡಲು ಪಕೋಡಾದಂತೆ ಕಾಣಿಸುತ್ತದೆ. ಆದರೆ ಇದನ್ನು ಮಸಾಲೆ ಸೇರಿಸಿ ತಯಾರಿಸಲಾಗುತ್ತದೆ.
ಇದನ್ನು ತಯಾರಿಸಲು ಸೋರೆಕಾಯಿ ಹೂವನ್ನು ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡಿಕೊಳ್ಳಿ. ನಂತರ ಇದಕ್ಕೆ ಖಾರ ಪುಡಿ ಮತ್ತು ಇತರ ಮಸಾಲೆಗಳನ್ನು ಸೇರಿಸಿ. ಇದನ್ನು ಈಗ ಕಡಲೆ ಹಿಟ್ಟಿನ ಮಿಶ್ರಣಕ್ಕೆ ಹಾಕಿ ಬೆರೆಸಿ. ನಂತರ ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿ ಬೋಂಡಾದಂತೆ ಕರಿಯಿರಿ.
ಸೋರೆಕಾಯಿ ಹೂವನ್ನು ಬಳಸಿ ರುಚಿಕರವಾದ ಕೊಫ್ತಾ ತಯಾರಿಸಬಹುದು. ಇದನ್ನು ಅನ್ನ ಮತ್ತು ಚಪಾತಿಯ ಜೊತೆ ಸವಿಯಬಹುದು.
ನೀವು ಕೂಡಾ ಸೋರೆಕಾಯಿ ಹೂವಿನ ಈ ಖಾದ್ಯಗಳನ್ನು ತಯಾರಿಸಿ ಸವಿಯಿರಿ.