ಹಲವಾರು ಆರೋಗ್ಯ ಪ್ರಯೋಜನ

ಬಾಳೆಹಣ್ಣಿನಂತೆ ಬಾಳೆಕಾಯಿ ಸೇವನೆಯಿಂದಲೂ ಹಲವಾರು ಆರೋಗ್ಯ ಪ್ರಯೋಜನಗಳಿವೆ.

Puttaraj K Alur
Oct 06,2023

ರಕ್ತದೊತ್ತಡ

ಬಾಳೆಕಾಯಿಯಲ್ಲಿರುವ ಪೊಟ್ಯಾಷಿಯಂ ಅಂಶ ರಕ್ತದೊತ್ತಡ ಕಡಿಮೆ ಮಾಡಿ, ಒತ್ತಡವನ್ನು ನಿವಾರಿಸುತ್ತದೆ.

ಮಲಬದ್ಧತೆ ಹಾಗೂ ಹೊಟ್ಟೆಯ ಸಮಸ್ಯೆ

ಬಾಳೆಕಾಯಿಯಲ್ಲಿರುವ ಪೆಕ್ಟಿನ್ ಅಂಶ ಶರೀರದಲ್ಲಿ ಇನ್ಸುಲಿನ್ ನಿರ್ವಹಿಸುವುದರೊಂದಿಗೆ ಮಲಬದ್ಧತೆ ಹಾಗೂ ಹೊಟ್ಟೆಯ ಸಮಸ್ಯೆಗಳಿಂದ ಉಪಶಮನ ನೀಡುತ್ತದೆ.

ಹೃದಯದ ಆರೋಗ್ಯ

ಬಾಳೆಕಾಯಿ ಹೃದಯದ ಆರೋಗ್ಯ ವೃದ್ದಿಸುವುದು ಹಾಗೂ ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ನಿಯಂತ್ರಣಗೊಳಿಸುವುದು.

ಜೀರ್ಣಾಂಗಗಳಲ್ಲಿರುವ ಬ್ಯಾಕ್ಟೀರಿಯಾ

ಬಾಳೆಕಾಯಿಯ ಸೇವನೆಯಿಂದ ಜೀರ್ಣಾಂಗಗಳಲ್ಲಿರುವ ಬ್ಯಾಕ್ಟೀರಿಯಾಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ.

ಕೊಲೆಸ್ಟ್ರಾಲ್ ಮಟ್ಟ

ಬಾಳೆಕಾಯಿ ಸೇವನೆಯು ಕೊಲೆಸ್ಟ್ರಾಲ್ ಮಟ್ಟವನ್ನು ಸಮತೋಲನಗೊಳಿಸುತ್ತದೆ.

ತೂಕ ಇಳಿಸಿಕೊಳ್ಳಬಹುದು

ಬಾಳೆಕಾಯಿ ಸೇವನೆಯು ಹೆಚ್ಚು ಹೊತ್ತು ಹೊಟ್ಟೆ ತುಂಬಿರುವ ಭಾವನೆ ಮೂಡಿಸುತ್ತದೆ. ಇದರಿಂದ ನೀವು ಸುಲಭವಾಗಿ ತೂಕ ಇಳಿಸಿಕೊಳ್ಳಬಹುದು.

ಸೂಕ್ತವಾದ ಆಹಾರ

ಮಧುಮೇಹಿಗಳಿಗೂ ಬಾಳೆಕಾಯಿ ಸೂಕ್ತವಾದ ಆಹಾರವಾಗಿದೆ.

VIEW ALL

Read Next Story