ನೀವು ಸುಂದರವಾದ ಕೂದಲಿನ ಕನಸು ಕಾಣುತ್ತಿದ್ದರೆ, ಅದಕ್ಕಾಗಿ ತುಸು ಕಾಳಜಿ ವಹಿಸುವುದು ಕೂಡಾ ಅಗತ್ಯ. ಕೂದಲಿಗೆ ಎಣ್ಣೆಯನ್ನು ಹಚ್ಚುವುದು ಇದರಲ್ಲಿ ಬಹಳ ಮುಖ್ಯ. ಕೂದಲಿಗೆ ಎಣ್ಣೆ ಹಚ್ಚದಿರುವ ದುಷ್ಪರಿಣಾಮಗಳನ್ನು ತಿಳಿಯೋಣ.
ಕೂದಲಿಗೆ ಎಣ್ಣೆ ಹಚ್ಚದೆ ಹೋದಲ್ಲಿ ಕೂದಲು ನಿಸ್ತೆಜವಾಗುತ್ತದೆ. ಮಾತ್ರವಲ್ಲ ಕೂದಳು ಉದುರಲು ಆರಂಭವಾಗುತ್ತದೆ.
ಕೂದಲಿಗೆ ಎಣ್ಣೆ ಹಚ್ಚದೆ ಹೋದಲ್ಲಿ ಕೂದಲು ತೇವಾಂಶ ಕಳೆದುಕೊಳ್ಳುತ್ತದೆ. ಇದರಿಂದ ಕೂದಲು ಶಕ್ತಿಯನ್ನು ಕಳೆದುಕೊಳ್ಳುತ್ತದೆ.
ಕೂದಲಿಗೆ ಎಣ್ಣೆ ಹಚ್ಚದಿದ್ದರೆ ನೆತ್ತಿ ಕೂಡಾ ಡ್ರೈ ಆಗಲು ಶುರುವಾಗುತ್ತದೆ. ಇದರಿಂದ ತುರಿಕೆಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
ಕೂದಲಿಗೆ ಎಣ್ಣೆ ಹಚ್ಚದೇ ಹೋದರೆ ತಲೆಹೊಟ್ಟಿನ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ತಲೆಹೊಟ್ಟು ಹೆಚ್ಚಾದರೆ ಕೂದಲು ಉದುರುವ ಸಮಸ್ಯೆ ಎದುರಾಗುವುದು
ಕೂದಲಿಗೆ ಎಣ್ಣೆ ಹಚ್ಚದೇ ಹೋದರೆ ಅಗತ್ಯ ಪೋಷಣೆ ಸಿಗುವುದಿಲ್ಲ. ಇದರಿಂದ ಕೂದಲು ಉದುರಲು ಆರಂಭವಾಗುತ್ತದೆ.
ಕೂದಲಿಗೆ ಎಣ್ಣೆ ಹಚ್ಚದ ಕಾರಣ ಕೂದಲು ಶುಷ್ಕವಾಗುತ್ತದೆ. ಇದರಿಂದ ಕೂದಲಿನ ತುದಿ ಒಡೆಯಲು ಆರಂಭವಾಗುತ್ತದೆ.
ಕೂದಲು ಉದುರುವ ಸಮಸ್ಯೆಯಿಂದ ಕಿರಿ ವಯಸ್ಸಿನಲ್ಲಿಯೇ ಬೋಳು ತಲೆ ಸಮಸ್ಯೆ ಎದುರಿಸಬೇಕಾಗುತ್ತದೆ.
ಈ ಎಲ್ಲಾ ಸಮಸ್ಯೆಗಳಿಂದ ಪರಿಹಾರ ಬೇಕಾದರೆ ನಿಯಮಿತವಾಗಿ ಕೂದಲಿಗೆ ಎಣ್ಣೆ ಹಚ್ಚಲೇ ಬೇಕು.