ಶಿಲ್ಪಾ ಶೆಟ್ಟಿ ಸೀರೆಯಲ್ಲಿ ಮಿಂಚಿದ್ದು, ಈ ಕುರಿತು ಫೋಟೋಸ್ ಇನ್ಸ್ಟಾದಲ್ಲಿ ಹಂಚಿಕೊಂಡಿದ್ದಾರೆ.
ಸುಂದರವಾದ ಗುಲಾಬಿ ಮತ್ತು ಬಿಳಿ ಪಟ್ಟೆ ಸೀರೆಯಲ್ಲಿ ಶಿಲ್ಪಾ ಅದ್ಭುತವಾಗಿ ಕಂಗೊಳಿಸಿದ್ದಾರೆ.
ಸೀರೆಗೆ ಪಾಶ್ಚಿಮಾತ್ಯ ಸ್ಪರ್ಶವನ್ನು ನೀಡಲಾಗಿದ್ದು, ಶೆಟ್ಟಿಗೆ ಸಖತ್ ಫಿಟ್ ಆಗಿದೆ. ಶಿಲ್ಪಾ ಅಂದ ಎಲ್ಲರನ್ನು ಗಮನವನ್ನು ಸೆಳೆಯಿತು.
ಗುಲಾಬಿ ಸೀರೆ ಜೊತೆಗೆ ಬೂದು ಬಣ್ಣದ ತೋಳಿಲ್ಲದ ಕುಪ್ಪಸ ತೊಟ್ಟು ಮಾದಕ ನಗೆ ಬೀರಿದ್ದಾಳೆ ಬಿಟೌನ್ ಸುಂದರಿ.
ಹೆಚ್ಚುವರಿಯಾಗಿ, ತನ್ನ ನೋಟವನ್ನು ಪೂರ್ಣಗೊಳಿಸಲು ಹೈ ಹೀಲ್ಸ್ ಧರಿಸಿ, ಆಕೃತಿ ತೋರಿದ್ದಾರೆ ನಟಿ ಶಿಲ್ಪಾ.
ಕೆಲವು ದಿನಗಳ ಹಿಂದೆ ಶಿಲ್ಪಾ ಅವರು ತಿಳಿ ನೀಲಿ ಬಣ್ಣದ ಸ್ಯಾಟಿನ್ ಸೀರೆಯುಟ್ಟು ಮಿಂಚಿದ್ದರು.
ಬಿಕಿನಿ ಬಿಟ್ಟು ಎಥ್ನಿಕ್ ವೇರ್ನಲ್ಲಿ ಕಾಣಿಸಿಕೊಂಡ ಚೆಲುವೆಗೆ ಅಂದಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ.