ತಲೆಹೊಟ್ಟು, ಕೂದಲು ಉದುರುವಿಕೆ, ಶುಷ್ಕತೆ ಮುಂತಾದ ಕೂದಲಿಗೆ ಸಂಬಂಧಿಸಿದ ಸಮಸ್ಯೆಗಳು ಮಳೆಗಾಲದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಗುತ್ತವೆ. ಇವೆಲ್ಲವನ್ನು ಹೋಗಲಾಡಿಸಲು ಕೆಲವು ಮನೆಮದ್ದುಗಳು ಇಲ್ಲಿವೆ.
ಮಳೆಗಾಲದಲ್ಲಿ ತಲೆ ಸ್ನಾನ ಮಾಡುವುದು ಬಹಳ ಅವಶ್ಯಕ. ಮಳೆಗಾಲದಲ್ಲಿ ತಲೆಹೊಟ್ಟಿನ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ.
ಈ ಋತುವಿನಲ್ಲಿ ಕೂದಲು ಉದುರುವುದನ್ನು ತಡೆಯಲು ಕೂದಲಿಗೆ ಈರುಳ್ಳಿ ರಸವನ್ನು ಹಚ್ಚಬೇಕು, ಈರುಳ್ಳಿ ರಸವನ್ನು ಎಣ್ಣೆಯ ಜೊತೆ ಬೆರೆಸಿ ಕೂದಲಿಗೆ ಮಸಾಜ್ ಮಾಡಬೇಕು.
ಮಳೆಗಾಲದಲ್ಲಿ ಕೂದಲು ಶುಷ್ಕವಾಗುವ ಸಮಸ್ಯೆ ಹೆಚ್ಚು. ಹೀಗಾಗಿ ಮಳೆಗಾಲದಲ್ಲಿ ಕೂದಲಿಗೆ ಎಣ್ಣೆಯ ಮಸಾಜ್ ಮಾಡುತ್ತಿರಬೇಕು.
ಮಳೆಗಾಲದಲ್ಲಿ ನೆತ್ತಿ ತುರಿಕೆ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದಕ್ಕೆ ಪರಿಹಾರವಾಗಿ ನೆಲ್ಲಿಕಾಯಿ ರಸವನ್ನು ತೆಗೆದುಕೊಂಡು ನೆತ್ತಿ ಮಸಾಜ್ ಮಾಡಬೇಕು.
ಮಳೆಗಾಲದಲ್ಲಿ ಕೂದಲು ನಿರ್ಜೀವವಾಗುವುದನ್ನು ತಡೆಯಲು ಮೊಸರಿನ ಹೇರ್ ಪ್ಯಾಕ್ ಮಾಡಿಕೊಳ್ಳಬಹುದು.
ಮಳೆಗಾಲದಲ್ಲಿ ಕೂದಲಿನ ಡೀಪ್ ಕ್ಲೀನ್ ಗಾಗಿ ಮುಲ್ತಾನಿ ಮಿಟ್ಟಿಯನ್ನು ಬಳಸಬಹುದು.
ಕೂದಲಿನ ಹೊಳಪು ಹೆಚ್ಚಿಸಲು ಆಲೋವಿರಾ ಜೆಲ್ ಹಚ್ಚಬೇಕು.
ಈ ಎಲ್ಲಾ ವಿಧಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಕೂದಲು ಉದುರುವುದನ್ನು ತಡೆಯಬಹುದು.