ಬಾತ್ ರೂಂ ಟೈಲ್ಸ್ ಶುಚಿಗೊಳಿಸುವ ಸಿಂಪಲ್ ಟಿಪ್ಸ್

ಬಾತ್ ರೂಂ ಟೈಲ್ಸ್ ಕ್ಲೀನ್ ಮಾಡೋದು ತುಂಬಾ ಕಷ್ಟ. ಸರಿಯಾಗಿ ಕ್ಲೀನ್ ಮಾಡದಿದ್ದರೆ ಜಾರಿ ಬೀಳುವ ಭಯ. ಬಾತ್ ರೂಮ್ ಟೈಲ್ಸ್ ಕ್ಲೀನಿಂಗ್ ಹ್ಯಾಕ್ಸ್ ಇಲ್ಲಿದೆ.

ನೀರು ಮತ್ತು ಬಿಳಿ ವಿನೆಗರ್ ಅನ್ನು ಸಮಾನ ಪ್ರಮಾಣದಲ್ಲಿ ಸೇರಿಸಿಕೊಂಡು ಒಂದು ಮಿಶ್ರಣ ತಯಾರಿಸಿಕೊಳ್ಳಿ. ಇದನ್ನು ಬಾತ್ ರೂಂ ಟೈಲ್ ಮೇಲೆ ಹಾಕಿ ಶುಚಿಗೊಳಿಸಬಹುದು.

ನಿಂಬೆ ರಸದಲ್ಲಿ ಆಸಿಡ್ ಇರುತ್ತದೆ. ಇದು ಕ್ಲೀನಿಂಗ್ ಏಜೆಂಟ್ ಆಗಿ ಕೆಲಸ ಮಾಡುತ್ತದೆ. ನಿಂಬೆ ರಸವನ್ನು ಬಾತ್ ರೂಂ ಟೈಲ್ಸ್ ಮೇಲೆ ಹಾಕಿ ಸಂಪೂರ್ಣವಾಗಿ ಶುಚಿಗೊಳಿಸಬಹುದು.

ಅರ್ಧ ಚಮಚ ಅಡಿಗೆ ಸೋಡಾ, ಒಂದು ಟೀ ಚಮಚ ಲಿಕ್ವಿಡ್ ಡಿಶ್ ಸೋಪ್ ಅನ್ನು ಮಿಕ್ಸ್ ಮಾಡಿ. ಇದನ್ನು ಬಾತ್ ರೂಂ ನೆಲದ ಮೇಲೆ ಸ್ಪ್ರೇ ಮಾಡಿ. ನಂತರ ಸ್ಕ್ರಬ್ ಮಾಡಿ. ಟೈಲ್ಸ್ ಫಳ ಫಳ ಹೊಳೆಯುವುದು.

ಕೊಳಕು ಬಾತ್ ರೂಂ ಟೈಲ್ಸ್ ಸ್ವಚ್ಚಗೊಳಿಸಲು ನೀರು ಮತ್ತು ಬ್ಲೀಚ್ ಮಿಶ್ರಣ ಮಾಡಿ. ಇದನ್ನು ಸ್ಪ್ರೇ ಬಾಟಲಿಯಲ್ಲಿ ಹಾಕಿಕೊಳ್ಳಿ. ಸ್ವಚ್ಛಗೊಳಿ ಸಬೇಕಾಗಿರುವ ಬಾತ್ ರೂಂ ಟೈಲ್ಸ್ ಮೇಲೆ ಸ್ಪ್ರೇ ಮಾಡಿ.

ಟೈಲ್ಸ್ ಮೇಲೆ ಅಂಟಿಕೊಂಡಿರುವ ಫಂಗಸ್ ಅನ್ನು ಹೋಗಲಾಡಿಸಲು ಅವುಗಳ ಮೇಲೆ ಉಪ್ಪು ಸಿಂಪಡಿಸಿ. ಸ್ವಲ್ಪ ಸಮಯದ ನಂತರ ಸ್ಕ್ರಬ್ ಮಾಡಿ.

ಹೈಡ್ರೋಜನ್ ಪೆರಾಕ್ಸೈಡ್ ಮತ್ತು ಗೋಧಿ ಹಿಟ್ಟನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಮಿಶ್ರಣ ಮಾಡಿಕೊಳ್ಳಿ. ಈ ಮಿಶ್ರಣವನ್ನು ಸ್ಕ್ರಬರ್ ರೂಪದಲ್ಲಿ ಬಳಸಿಕೊಳ್ಳಿ.

ಡಿಟರ್ಜೆಂಟ್ ಪೌಡರ್ ಮತ್ತು ಬೇಕಿಂಗ್ ಸೋಡಾ ಹಾಕಿ ದಪ್ಪ ಪೇಸ್ಟ್ ತಯಾರಿಸಿಕೊಳ್ಳಿ. ಇದನ್ನು ಟೈಲ್ಸ್ ಮೇಲೆ ಹಾಕಿ 15 ನಿಮಿಷಗಳವರೆಗೆ ಹಾಗೆಯೇ ಬಿಡಿ. ನಂತರ ಸ್ಕ್ರಬರ್ ಸಹಾಯದಿಂದ ಉಜ್ಜಿ ತೊಳೆಯಿರಿ.

ಮೇಲೆ ಹೇಳಿದ ಟಿಪ್ಸ್ ಬಳಸುವ ಮೂಲಕ ನಿಮ್ಮ ಮನೆಯ ಬಾತ್ ರೂಂ ಟೈಲ್ಸ್ ಅನ್ನು ಸುಲಭವಾಗಿ ಶುಚಿಗೊಳಿಸಬಹುದು.

VIEW ALL

Read Next Story